ಧಾರವಾಡ: ವಿದ್ಯುತ್ ತಗುಲಿ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಹಳೆ ತೇಗೂರ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ದಿವ್ಯಾ ಮಡಿವಾಳಪ್ಪ ಹಡಪದ (21) ಸಾವನ್ನಪ್ಪಿದ ಯುವತಿ. ಇಂದು ಮುಂಜಾನೆ ಮನೆಯಲ್ಲಿ ನಲ್ಲಿ ನೀರಿಗೆ ವಿದ್ಯುತ್ ಮೋಟರ್ ಹಚ್ಚಿದ ಸಂದರ್ಭದಲ್ಲಿ ವಿದ್ಯುತ್ ತಗುಲಿ ಈ ದುರ್ಘಟನೆ ಸಂಭವಿಸಿದೆ.
ಈ ಕುರಿತು ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
23/11/2021 07:25 pm