ಧಾರವಾಡ: ಬೈಕ್ ತೆಗೆದುಕೊಂಡು ಹೊರಟಿದ್ದ ವ್ಯಕ್ತಿಯೋರ್ವ ಆಯತಪ್ಪಿ ಬಿದ್ದು ತೀವ್ರವಾಗಿ ಗಾಯಗೊಂಡ ಘಟನೆ ವಿದ್ಯಾಗಿರಿಯ ಜೆಎಸ್ಎಸ್ ಕಾಲೇಜು ಬಳಿ ಸಂಭವಿಸಿದೆ.
ಧಾರವಾಡ ತಾಲೂಕಿನ ಲೋಕೂರು ಗ್ರಾಮದ ಕರಿಯಪ್ಪ ಮಹದೇವಪ್ಪ ಗೊರವನಕೊಳ್ಳ (53) ಎಂಬ ವ್ಯಕ್ತಿಯೇ ತೀವ್ರವಾಗಿ ಗಾಯಗೊಂಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗಾರೆ ಕೆಲಸ ಮಾಡುವ ಕರಿಯಪ್ಪ ಎಂದಿನಂತೆ ತನ್ನ ದ್ವಿಚಕ್ರ ವಾಹನ ತೆಗೆದುಕೊಂಡು ಗಾಂಧಿನಗರದತ್ತ ಹೊರಟಿದ್ದ. ಇದ್ದಕ್ಕಿದ್ದಂತೆ ಆಯತಪ್ಪಿ ಬಿದ್ದ ಪರಿಣಾಮ, ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಇದರಿಂದ ತೀವ್ರವಾದ ರಕ್ತಸ್ರಾವವಾಗಿತ್ತು.
Kshetra Samachara
01/12/2020 09:54 pm