ಹುಬ್ಬಳ್ಳಿ: ಸ್ತಬ್ಧವಾಗಿದ್ದ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಾರಾಕಾಸ್ತ್ರಗಳು ಸದ್ದು ಮಾಡಿದ್ದು,ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಗರದಲ್ಲಿ ಎರಡು ಕಡೆಗಳಲ್ಲಿ ಚಾಕು ಇರಿತವಾಗಿದೆ.
ಶೋಯೆಬ್ ಅಬ್ಬನ್ನವರ (24) ಎಂಬುವವರಿಗೆ ದುಷ್ಕರ್ಮಿಗಳು ಹಿಂಭಾಗದಲ್ಲಿ ಚಾಕು ಹಾಕಿದ್ದಾರೆ.ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಲ್ಲದೇ ಇತ್ತ ಕೇಶ್ವಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ಚಾಕು ಇರಿತವಾಗಿದ್ದು, ಮಾಧವ ನಗರದಲ್ಲಿ ಚಾಕು ಚೂರಿಗಳು ಸದ್ದು ಮಾಡಿದೆ.
ಹಳೆ ವೈಷಮ್ಯದ ಹಿನ್ನೆಲೆ ಕೃತ್ಯ ನಡೆದಿರುವುದಾಗಿ ಶಂಕೆ ವ್ಯಕ್ತವಾಗಿದ್ದು,ಚಾಕು ಹಾಕಿದ ದುಷ್ಕರ್ಮಿಗಳು ಪರಾರಿಯಾಗಿದ್ದು,ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ.
Kshetra Samachara
03/11/2020 09:26 am