ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

205 ಕ್ವಿಂಟಲ್ ಅಕ್ಕಿ ವಶಕ್ಕೆ ಪಡೆದ ಪೊಲೀಸರು

ಧಾರವಾಡ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಸೇರಿದಂತೆ 5.25 ಲಕ್ಷ ಮೌಲ್ಯದ ಅಕ್ಕಿಯನ್ನು ಧಾರವಾಡ ಉಪನಗರ ಠಾಣೆ ಪೊಲೀಸರು ಗುರುವಾರ ತಡರಾತ್ರಿ ವಶಪಡಿಸಿಕೊಂಡಿದ್ದಾರೆ.

ಈ ಅಕ್ಕಿ ಮೂಟೆಗಳು ಧಾರವಾಡದ ಪೆಂಡಾರಗಲ್ಲಿಯ ಶಕೀಲ್ ಶೇಖ್ ಮತ್ತು ರಜಾಕ್ ಶೇಖ್ ಎಂಬುವರಿಗೆ ಸೇರಿದ್ದವು ಎಂದು ತಿಳಿದು ಬಂದಿದೆ. ಆರೋಪಿಗಳು ಪಡಿತರ ಅಕ್ಕಿಯನ್ನು ಖರೀದಿಸಿ ಅಧಿಕ ಲಾಭಕ್ಕಾಗಿ ಮಾರಲು ಸಾಗಿಸಲು ಯತ್ನಿಸುತ್ತಿದ್ದ ವೇಳೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ದೂರಿನ ಮೇರೆಗೆ ಪೊಲೀಸರು ದಾಳಿ ನಡೆಸಿ 205 ಕ್ವಿಂಟಲ್ ಅಕ್ಕಿ ವಶಕ್ಕೆ ಪಡೆದಿದ್ದಾರೆ.

ಡಿಸಿಪಿ ಪಿ.ಕೃಷ್ಣಕಾಂತ, ಎಸಿಪಿ ಜಿ.ಅನುಷಾ, ಸಿಪಿಐ ಪ್ರಮೋದ ಯಲಿಗಾರ, ಪಿಎಸ್‌ಐ ಶ್ರೀಮಂತ ಹುಣಸಿಕಟ್ಟಿ, ಎಎಸ್‌ಐಗಳಾದ ಆರ್.ಎಚ್.ನದಾಫ, ಎಂ.ಆರ್. ಮಲ್ಲಿಗವಾಡ, ಸಿಬ್ಬಂದಿ ಗುರು ಒಡೆಯರ, ಚಂದ್ರು ನಡುವಿನಮನಿ. ಸಿ.ಡಿ. ಬಳ್ಳಾರಿ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

30/10/2020 10:03 am

Cinque Terre

66.37 K

Cinque Terre

15

ಸಂಬಂಧಿತ ಸುದ್ದಿ