ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ ದಂಧೆ ವಿರುದ್ಧ ನೂತನ ಆಯುಕ್ತರ ನಿರ್ದೇಶನದ ಮೇರೆಗೆ
ಕಾರ್ಯಾಚರಣೆ ನಡೆಸಿದ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಟೂರ್ನಿಯ ಪಂದ್ಯಗಳ ವೇಳೆ ನಗರದಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ 24,800 ನಗದು ಹಾಗೂ ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಂಬಾರ ಓಣಿಯ ಅಬ್ದುಲ್ ರಜಾಕ ಹೆಬ್ಬಳ್ಳಿ, ಸಿದ್ರಾಮೇಶ್ವರ ಕಾಲೊನಿಯ ಅಶೋಕ ಕುಂದರಗಿ, ಜಾಲಗಾರ ಓಣಿಯ ಸಂತೋಷ ಜಾಲಗಾರ ಮತ್ತು ಸಿದ್ದಗಂಗಾ ನಗರದ ತನ್ವೀರ್ ಶೇಖ್ ಎಂಬುವರನ್ನು ಬಂಧಿಸಿದ್ದಾರೆ.
ಬೆಟ್ಟಿಂಗ್ ನಡೆಯುತ್ತಿದ್ದ ವಿದ್ಯಾನಗರ ಠಾಣೆ ವ್ಯಾಪ್ತಿಯ ಉಣಕಲ್ ಟಿಂಬರ್ ಯಾರ್ಡ್‌ನ ಸಿದ್ರಾಮೇಶ್ವರ ಕಾಲೊನಿಯ ಅಶೋಕ ಕುಂದರಗಿ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.
Kshetra Samachara
24/10/2020 09:11 am