ಹುಬ್ಬಳ್ಳಿ: ಪುನೀತ್ ರಾಜ್‍ಕುಮಾರ್ ನಮ್ಮನ್ನ ಬಿಟ್ಟು ಹೋಗಿದ್ದು ಯಾರಿಂದಲೂ ಸಹಿಸಿಕೊಳ್ಳಲಾಗುತ್ತಿಲ್ಲ. ಅಪ್ಪು ನ ಕಳೆದುಕೊಂಡಿದ್ದು ಸ್ವಂತ ನನ್ನ ಮಗನನ್ನೇ ಕಳೆದುಕೊಂಡಂತಾಗಿದೆ ಎಂದು ಹಿರಿಯ ಹಾಸ್ಯ ಕಲಾವಿದರು ಎಮ್.ಎಸ್ ಉಮೇಶ ಭಾವುಕರಾದರು.
ಪಬ್ಲಿಕ್ ನೆಕ್ಸ್ಟ್ ಮೂಲಕ ಮಾತನಾಡಿದ ಅವರು, ಚಿಕ್ಕ ವಯಸ್ಸಿನಿಂದಲೆ ಅಪ್ಪುನ ನೋಡ್ತಾ ಬಂದಿದ್ದೆನೆ, ಅವರ ತಂದೆ ದೇವರ ಅಂತಹ ಮನುಷ್ಯರು. ಅವರ ತಂದೆ ಅಂತಯೇ ಪುನೀತ್ ರಾಜ್‍ಕುಮಾರ್ ಕೂಡ. ಅವರು ಚಿತ್ರದಲ್ಲಿ ಅಷ್ಟೇ ಅಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು ಹಲವಾರು ಇತ್ತು. ಅವರು ಹೋದ ಮೇಲೆ ಅಪ್ಪು ಮಾಡಿ ಒಳ್ಳೆಯ ಕೆಲಸಗಳು ತಿಳಿಯುತ್ತಿವೆ. ಇದ್ದಾಗ ಏನು ತೋರಿಸಿಕೊಳ್ಳಲಿಲ್ಲ ಆ ವ್ಯಕ್ತಿ. ದೊಡ್ಡಮನೆಗೆ ತಕ್ಕ ಮಗ ಎಂದು ಅಪ್ಪುನ ನೆನೆಸಿಕೊಂಡು ಭಾವುಕರಾದರು
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/03/2022 10:55 pm