ಹುಬ್ಬಳ್ಳಿ: ಕೆಲವೇಕೆಲ ನಿರ್ದೇಶಕರಿಗೆ ಮಾತ್ರವೇ ಇಡೀ ಸಿನಿಮಾದ ತುಂಬಾ ಹಾಸ್ಯರಸವನ್ನು ಪರಿಣಾಮಕಾರಿಯಾಗಿ ಜಿನುಗಿಸುವ ಕಲೆ ಸಿದ್ಧಿಸಿರುತ್ತದೆ. ಅಂಥವರ ಸಾಲಿನಲ್ಲಿ ಶ್ರೀನಿ ಕೂಡಾ ಸೇರಿಕೊಳ್ಳುತ್ತಾರೆ. ಈ ವಿಚಾರವನ್ನು ‘ಓಲ್ಡ್ ಮಾಂಕ್’ ಚಿತ್ರದ ಅಮೋಘ ಪ್ರದರ್ಶನವೇ ಸಾಕ್ಷೀಕರಿಸುವಂತಿದೆ. ಇದರೊಂದಿಗೆ ಶ್ರೀನಿ ಮತ್ತು ಆದಿತಿ ಪ್ರಭುದೇವ ಜೋಡಿಯೂ ಮಸ್ತಾಗಿರೊ ಕಥೆಯೊಂದಿಗೆ ಪ್ರೇಕ್ಷಕರ ಮನಗೆದ್ದಿದೆ.
ಹೌದು, ಓಲ್ಡ್ ಮಾಂಕ್ ಈಗಾಗಲೇ ಪೋಸ್ಟರ್ ಹಾಗೂ ತನ್ನ ಟ್ರೈಲರ್ ನಲ್ಲೇ ಸಾಕಷ್ಟು ಸದ್ದು ಮಾಡಿತ್ತು. ಡಿಫರೆಂಟ್ ಟೈಟಲ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿತ್ತು. ಇದೀಗ ಆ ಎಲ್ಲಾ ನಂಬಿಕೆಗಳು ತೆರೆಯ ಮೇಲೂ ಮೂಡಿಬಂದು, ಸಖತ್ ಮನರಂಜನೆ ನೀಡಿದೆ.
ಅಂದ ಹಾಗೇ ಶ್ರೀನಿ ನಿರ್ದೇಶನ ಮಾಡಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಓಲ್ಡ್ ಮಾಂಕ್ ಸಿನಿಮಾ ಸಧ್ಯ ರಿಲೀಸ್ ಆಯ್ತು. ಹುಬ್ಬಳ್ಳಿ ನಗರದ ರೂಪಂ ಸೇರಿದಂತೆ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದೆ. ಮೊದಲ ದಿನವೇ ಅಭಿಮಾನಿಗಳ ಸಾಗರ ಹರಿದು ಬಂದಿತ್ತು. ಇನ್ನು ಚಿತ್ರದ ನಟಿ ಆದಿತಿ ಪ್ರಭುದೇವ ನಗರದ ರೂಪಂ ಚಿತ್ರಮಂದಿರದಲ್ಲಿ ಅವರ ಅಜ್ಜಿ ಮತ್ತು ಅಜ್ಜನೊಂದಿಗೆ ಚಿತ್ರವನ್ನು ವೀಕ್ಷಿಸಿದರು.
ಒಟ್ಟಾರೆ ಹೇಳೊದಾದ್ರೆ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಜೊತೆಗೆ ಈಗಿನ ಜಮಾನವನ್ನೂ ರಂಜಿಸಿರುವ ಓಲ್ಡ್ ಮಾಂಕ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/02/2022 04:08 pm