ಹುಬ್ಬಳ್ಳಿ:ಕೊರೋನಾ ಜಗತ್ತನ್ನೇ ಅಲ್ಲಾಡಿಸಿತು. ಇದರಿಂದ ಸಾವು ,ನೋವು ಸಂಭವಿಸಿ ಜನ ಜೀವನ ಅಸ್ತವ್ಯಸ್ತಗೊಂಡಿತು. ಇದೀಗ ಮೂರನೇ ಅಲೆ ಅಷ್ಟೊಂದು ತೊಂದರೆ ನೀಡದಿದ್ದರೂ ನಾವೆಲ್ಲ ಎಚ್ಚರಿಕೆಯಿಂದ ಇರಬೇಕಾದ ಸ್ಥಿತಿ ಇದೆ ಎಂದು ಗೋಕುಲ ಠಾಣೆ ಇನ್ಸ್‌ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಹೇಳಿದರು.
ನಗರದಲ್ಲಿಂದು ಎನ್.ಕೆ.ಎಂ.ಪಿ.ಎಸ್ ನಿರ್ಮಾಣದ 'ಮತ್ತೆ ಲಾಕ್‌ಡೌನಾ..?' ಎಂಬ ಕಿರುಚಿತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇದೀಗ ಕೊರೊನಾ ಓಡಿಸಲು ಎಲ್ಲ ಆಸ್ಪತ್ರೆಯಲ್ಲಿ ಸಿದ್ಧತೆ ಇದೆ. ಜನರಲ್ಲಿ ತಿಳಿವಳಿಕೆ ಮೂಡಿದೆ. ಹೀಗಾಗಿ ಎಚ್ಚರಿಕೆಯಿಂದ ಇದ್ದರೆ ಕೊರೊನಾ ಗೆಲ್ಲಬಹುದು ಎಂದರು.
ಲಾಕ್‌ಡೌನ್ ಆದಾಗ ಹಲವು ಜನರಿಗೆ ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಬಂದಿತು. ಹಲವು ಸಂಘ ಸಂಸ್ಥೆಯವರು ಬಡವರ ನೆರವಿಗೆ ನಿಂತರು. ಇದೀಗ ಲಾಕ್‌ಡೌನ್ ಎಂದರೆ ಜನ ಭಯ ಪಡುವಂತಾಗಿದೆ. ದೇಶದ ಆರ್ಥಿಕ ಸ್ಥಿತಿ ಏರುಪೇರಾಗುತ್ತದೆ. ಅದಕ್ಕಾಗಿ ಎಚ್ಚರಿಕೆಯೊಂದೇ ಇದಕ್ಕೆ ಸಮರ್ಪಕವಾದ ಮದ್ದು ಎಂದು ಹೇಳಿದರು. ಸಾಮಾನ್ಯವಾಗಿ ಜನರಲ್ಲಿ ಲಾಕ್‌ಡೌನ್ ಎಂದ ತಕ್ಷಣ ಮನದಲ್ಲಿ ಮೂಡುವ ಭಾವನೆಯನ್ನು ಈ ಕಿರುಚಿತ್ರದಲ್ಲಿ ಹಿಡಿದಿಡಲಾಗಿದೆ. ಯುವಕರ ಇಂತಹ ವಿನೂತನ ಕಾರ್ಯಕ್ಕೆ ನಾವೆಲ್ಲ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಡಾ. ವೀರೇಶ್ ಹಂಡಿಗಿ, ನಟ ವಿಕ್ರಮ ಕುಮಟಾ ಹಾಜರಿದ್ದರು. ನಿರ್ದೇಶಕ ಬಾಬಾ ಮಾತನಾಡಿ, ಈ ಕಿರುಚಿತ್ರವನ್ನು ಎಲ್ಲರೂ ಎನ್.ಕೆ.ಎಂ.ಪಿ.ಎಸ್ ಯೂಟ್ಯೂಬ್ ಚಾನಲ್‌ನಲ್ಲಿ ನೋಡಬಹುದು ಎಂದರು. ಸಂಭಾಷಣೆಯನ್ನು ವಿಕ್ರಂ ಕುಮಟಾ ಬರೆದಿದ್ದುಘಿ, ಬಾಬಾ ನಿರ್ದೇನ ಮಾಡಿದ್ದಾರೆ. ಅಭಿಷೇಕ ಕುಲಕರ್ಣಿ ಎಡಿಟಿಂಗ್ ಮಾಡಿದ್ದು, ಪಿಆರ್‌ಒ ಆಗಿ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್ ಕಾರ್ಯನಿರ್ವಹಿಸಿದ್ದಾರೆ.
ಈ ಕಿರುಚಿತ್ರವನ್ನು ನಟ ಪುನೀತ್ ರಾಜಕುಮಾರ ಅವರಿಗೆ ಅರ್ಪಿಸಿದ್ದು, ನಟ ಶಂಕನಾಗ್ ಹೇಳಿದ ಸತ್ತ ಮೇಲೆ ಮಲಗುವುದು ಇದ್ದೇ ಇದೆ. ಬದುಕಿದ್ದಾಗ ಏನನ್ನಾದರೂ ಸಾಧಿಸು ಎಂಬ ಮಾತಿನೊಂದಿಗೆ ಚಿತ್ರ ಆರಂಭವಾಗುತ್ತಿರುವುದು ವಿಶೇಷವಾಗಿದೆ.
Kshetra Samachara
22/01/2022 05:44 pm