ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಕಿರು ಚಿತ್ರದಲ್ಲಿ ಮೂಡಿ ಬರಲಿದೆ ಕಲ್ಯಾಣಪುರದ ಕಥೆ

ಕುಂದಗೋಳ: ತ್ರಿವಿಧ ದಾಸೋಹಿ ಲಿಂಗೈಕ್ಯ ಕಲ್ಯಾಣಪುರ ಬಸವಣ್ಣಜ್ಜನವರು ಕಲ್ಯಾಣಪುರ ಮಠವನ್ನು ಸಂಸ್ಥಾಪನೆ ಮಾಡಿ 2023ಕ್ಕೆ ಐವತ್ತು ವರ್ಷ ಪೂರೈಸಲಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು ಕುಂದಗೋಳ ತಾಲೂಕಿನ ಹಳ್ಳಿಗಳಲ್ಲಿ ಶ್ರೀಗಳ ನಡೆ ಭಕ್ತರ ಮನೆ ಕಡೆ ಎಂಬ ಕಾರ್ಯಕ್ರಮದ ಮೂಲಕ ಪ್ರವಚನ ಕೈಗೊಂಡಿದ್ದು, ಇದರ ನಡುವೆ ಶ್ರೀಗಳ ಸಂಪೂರ್ಣ ಕಥಾ ಹಂದರದ ಕಿರು ಚಿತ್ರ ಶೂಟಿಂಗ್ ಸಹ ಆರಂಭವಾಗಿದೆ.

ತ್ರಿವಿಧ ದಾಸೋಹಿ ಲಿಂಗೈಕ್ಯ ಬಸವಣ್ಣಜ್ಜನವರು ಮಠ ಅಭಿವೃದ್ಧಿ ಪಡಿಸಿದ ವಿಚಾರ ಹಾಗೂ ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು ಮಠವನ್ನು ಮುಂದುವರೆಸಿಕೊಂಡು ಹೋದ ಸಂಪೂರ್ಣ ಪವಾಡ, ಭಕ್ತಿ ಸಾಕ್ಷಾತ್ಕಾರದ ಸಾರಾಂಶ ಜನೇವರಿ 2023ಕ್ಕೆ ಭಕ್ತರಿಗೆ ನೋಡಲು ದೊರೆಯಲಿದ್ದು, ಈಗ ಚಿತ್ರಿಕರಣ ಆರಂಭವಾಗಿದೆ. ಕುಂದಗೋಳ ತಾಲೂಕಿನ ಭಕ್ತರು ನಡುವೆ ಚಿತ್ರಿಕರಣ ನಡೆದಿದ್ದು ವಂದೇ ಮಾತರಂ ಸ್ಟಡಿಯೋ ಈ ಕಾರ್ಯ ವಹಿಸಿಕೊಂಡಿದೆ.

Edited By : Manjunath H D
Kshetra Samachara

Kshetra Samachara

13/01/2022 06:23 pm

Cinque Terre

21.07 K

Cinque Terre

0

ಸಂಬಂಧಿತ ಸುದ್ದಿ