ಹುಬ್ಬಳ್ಳಿ: ನಟ ಪುನೀತ್ ರಾಜ್‌ಕುಮಾರ್ ಅವರ ಅಭಿನಯಕ್ಕೆ ಮನಸೋಲದವರೇ ಇಲ್ಲ. ಅಪ್ಪು ಅವರಿಗೆ ಹಿರಿಯರು ಮಾತ್ರವಲ್ಲದೆ ಪುಟಾಣಿಗಳ ಅಭಿಮಾನ ಬಳಗ ಕೂಡ ಸಾಕಷ್ಟಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯ ಬಾಲಕಿ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನಕ್ಕೆ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಈ ದೃಶ್ಯವು ಎಲ್ಲರ ಮನಸ್ಸನ್ನು ಕಲಕುವಂತೆ ಮಾಡಿದೆ. ಹುಬ್ಬಳ್ಳಿಯ ದಾನೇಶ್ವರಿ ಶಿರಕೋಳ ಎಂಬ ಬಾಲಕಿ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ. ನಿನ್ನೆ ಸಂಜೆ ಶಾಲೆಯಿಂದ ಮನೆಗೆ ಬರುತ್ತಿದ್ದಂತಯೇ ಬಿಕ್ಕಿ ಬಿಕ್ಕಿ ಅಳತೊಡಗಿದ್ದಾಳೆ. ಮನೆಯವರು ಎಷ್ಟೇ ಸಮಾಧಾನ ಮಾಡಿದರೂ ಬಾಲಕಿ ಮಾತ್ರ ಪುನೀತ್ ರಾಜ್‌ಕುಮಾರ್ ನೆನೆದು ಭಾವುಕಳಾಗಿ ಕಣ್ಣೀರು ಸುರಿಸಿದ್ದಾಳೆ.
Kshetra Samachara
30/10/2021 11:50 am