ನವಲಗುಂದ: ಕರುನಾಡ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧಾನಕ್ಕೆ ರಾಜ್ಯ ಅಷ್ಟೇ ಅಲ್ಲದೆ ದೇಶದ ಹಲವೆಡೆಯಿಂದ ಸಂತಾಪ ವ್ಯಕ್ತವಾಗಿದೆ. ಪಟ್ಟಣದಲ್ಲಿ ಅಭಿಮಾನಿಗಳು ಕಣ್ಣೀರಿಡುವ ದೃಶ್ಯ ಮನಕಲುಕುವಂತಿತ್ತು.
ಹೌದು. ದೊಡ್ಡಮನೆಯ ಕೊನೆಯ ಕೊಂಡಿ, ಅಪಾರ ಅಭಿಮಾನಿಗಳ ಮನಗೆದ್ದ ಯೂತ್ ಐಕೊನ್ ಎಂದೆಲ್ಲ ಆರಾಧಿಸುತ್ತಿದ್ದ ಪುನೀತ್ ರಾಜ್‌ಕುಮಾರ್ ಅವರ ಅಗಲುವಿಕೆ ಈಗ ಕನ್ನಡಿಗರ ಕಣ್ಣಂಚಲಿ ನೀರು ತರಿಸುತ್ತಿದ್ದು, ಕನ್ನಡಿಗರಿಗೆ ನುಂಗಲಾರದ ತುತ್ತಾಗಿದೆ. ಇನ್ನು ನವಲಗುಂದದ ರಾಜ್‌ಕುಮಾರ್ ಅಭಿಮಾನಿಗಳ ಬಳಗದಲ್ಲಿ ದುಃಖ ಮನೆ ಮಾಡಿದ್ದು, ಕಣ್ಣೀರು ಹಾಕುವ ದೃಶ್ಯಗಳು ಮನಕಲುಕುವಂತಿತ್ತು.
Kshetra Samachara
29/10/2021 05:05 pm