ವರದಿ: ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
ಕುಂದಗೋಳ : ಕನ್ನಡದ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇನ್ನಿಲ್ಲಾ ಎಂಬ ಸಂಗತಿ ಯಾರಿಗೆ ನೋವು ತಂದಿಲ್ಲಾ ಹೇಳಿ, ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ಮನೆ ಮಾಡಿದ ಆ ನಗು ಮುಖ ಆ ಪ್ರೀತಿ ಆ ವಾತ್ಸಲ್ಯ ಆ ಕನ್ನಡದ ಪ್ರೇಮ ಎಲ್ಲವೂ ಕನ್ನಡಿಗರನ್ನು ಸದಾ ಕಾಡುತ್ತಲಿದೆ.
ಅದರಂತೆ ಇಲ್ಲೋಬ್ಬ ಅಭಿಮಾನಿ ತನ್ನ ಮಗನ ಸಾವಿಗಿಂತ ಪುನೀತ್ ರಾಜಕುಮಾರ್ ಸಾವಿಗೆ ನೋಂದು ಹೋಗಿ "ದೇವರಿಲ್ಲಾ ಅವನು ಕ್ರೂರಿ" ಅವನಿದ್ರೇ ಯಾಕೆ ? ಪುನೀತ್ ರಾಜಕುಮಾರ್'ಗೆ ಸಾವು ಬರ್ತಿತ್ತು ? ಎನ್ನುತ್ತಿದ್ದಾರೆ.
ಹೌದು ! ಗುರುಪಾದಯ್ಯ ಪೂಜಾರ ಎಂಬುವವರನ್ನು ಕನ್ನಡದ ಕಂದ ಅಪ್ಪುವಿನ ಸಾವು ಅಷ್ಟು ಕಾಡಿದೆ, ನಿನ್ನೆ ಅಪ್ಪು ಇನ್ನಿಲ್ಲಾ ! ಎಂಬ ಸುದ್ಧಿ ತಿಳಿದು ತಮ್ಮ ಕಿರಾಣಿ ಅಂಗಡಿ ಬಾಗಿಲು ಹಾಕಿ ಟಿವಿ ಮುಂದೆ ಕಂಬನಿ ಹಾಕಿದ ಇವರು, ಇಂದು ತಮ್ಮ ಅಂಗಡಿ ಮುಂದೆ ಈ ರೀತಿ ಯುವರತ್ನನ ಭಾವಚಿತ್ರ ಹಾಕಿ ಗೌರವ ಸಲ್ಲಿಸಿ ಪುನೀತ್ ರಾಜಕುಮಾರ್ ಜೊತೆಗಿನ ಬಾಂಧವ್ಯದ ಬಗ್ಗೆ ಏನು ಹೇಳಿದ್ರೂ ಕೇಳಿ.
ವಜ್ರೇಶ್ವರಿ ಕಂಬೈನ್ಸ್ ಅದು ಪುನೀತ್ ರಾಜಕುಮಾರ್'ಗೆ ಹತ್ತಿರವಾಗಿ 3 ವರ್ಷ ಬೆಂಗಳೂರು ಹಾಗೂ ಹುಬ್ಬಳ್ಳಿಯ ಅವರ ನಿವಾಸಿ ನೋಡಿಕೊಂಡು 27 ವರ್ಷ ಸಿನಿ ಜಗತ್ತಿನಲ್ಲಿ ಕರ್ತವ್ಯ ನಿರ್ವಹಿಸಿ ಸಧ್ಯ ಕಿರಾಣಿ ಅಂಗಡಿ ನಡೆಸುತ್ತಿರುವ ಗುರುಪಾದಯ್ಯನವರನ್ನು ನಿಜಕ್ಕೂ ಅವರ ಮಗನ ಸಾವಿಗಿಂತ ಪುನೀತ್ ರಾಜಕುಮಾರ್ ಸಾವು ಅತಿ ಹೆಚ್ಚು ಕಾಡಿದೆ.
Kshetra Samachara
30/10/2021 09:22 pm