ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಹೋರಿ ಓಟ, ಬಲೂನ್ ಹಾರಾಟ, ಕ್ರಾಂತಿ ಪ್ರಮೋಷನ್ ನೋಟ

ಕುಂದಗೋಳ: ಸಾಮಾನ್ಯವಾಗಿ ಸ್ಟಾರ್ ನಟರ ಫಿಲ್ಮ್‌ ಪ್ರಮೋಷನ್ ಹೇಗಿರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ ಅದರಲ್ಲೂ ಡಿ.ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫಿಲ್ಮ್‌ ಪ್ರಮೋಷನ್ ಅಂದ್ರೆ ಆ ಕ್ರೇಜ್ ಬೇರೆ.

ಇದೀಗ ಅದೇ ಡಿ.ಬಾಸ್ ಅಭಿನಯದ 'ಕ್ರಾಂತಿ' ಫಿಲ್ಮ್ ಪ್ರಮೋಷನ್ ಇಲ್ಲೊಂದು ಹಳ್ಳಿಯಲ್ಲಿ ಅತಿ ವಿಶೇಷವಾಗಿ ನಡೆದಿದೆ. ಹೌದು ! ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ಹೋರಿಯೊಂದಕ್ಕೆ ಬಣ್ಣ ಬಳಿದು ಹೋರಿ ಮೈಮೇಲೆ ಡಿ ಬಾಸ್ ಹೆಸರು ಬರೆದಿದ್ದಾರೆ. ಜತೆಗೆ ನಾಡ ಧ್ವಜದ ಬಣ್ಣ ಕೆಂಪು ಹಳದಿ ಬಲೂನ್‌ಗಳನ್ನು ಹೋರಿ ಕೊಂಬುಗಳಿಗೆ ಕಟ್ಟಿ ಊರೆಲೆಲ್ಲಾ ಮೆರವಣಿಗೆ ಮಾಡಿದ್ದಾರೆ. ಈ ಮೂಲಕ ಮಕ್ಕಳು ಜೈ ಡಿ ಬಾಸ್.. ದರ್ಶನ್‌ಗೆ ಜಯವಾಗಲಿ ಎಂದು ಫಿಲ್ಮ್ ಪ್ರಮೋಷನ್ ಮಾಡಿದ್ದಾರೆ.

ಅಂದಹಾಗೆ ಕೇವಲ ಮಕ್ಕಳು ಮಾತ್ರವಲ್ಲ ಯುವಕರು, ನಾಗರೀಕರು, ವೃದ್ಧರು, ಮಹಿಳೆಯರು ಸಹ ಈ ಫಿಲ್ಮ್ ಪ್ರಮೋಷನ್‌ನಲ್ಲಿ ಭಾಗವಹಿಸಿ ಕ್ರಾಂತಿ ಫಿಲ್ಮ್ ಪೋಸ್ಟರ್ ಹಿಡಿದು ಪ್ರಚಾರ ಮಾಡಿದ್ದಾರೆ. ಈ ಐಡಿಯಾ ಹೊಳೆದಿದ್ದು ಚಾಕಲಬ್ಬಿ ಗ್ರಾಮದ ಯುವ ಹೈದ ಸಿದ್ಧಾರೂಢ ಹುಚ್ಚೋಗಿಗೆ ಅದಕ್ಕೆ ಗ್ರಾಮಸ್ಥರು ಸಾಥ್ ಕೊಟ್ಟು ದರ್ಶನ ಫಿಲ್ಮ್‌ ಕ್ರಾಂತಿಗೆ ಶುಭ ಕೋರಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/07/2022 05:14 pm

Cinque Terre

51.93 K

Cinque Terre

1

ಸಂಬಂಧಿತ ಸುದ್ದಿ