ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಪ್ಪಟ ಕರ್ನಾಟಕ ಸ್ಟೋರ್‌ಗೆ ನಬಾರ್ಡ್ ಅಧ್ಯಕ್ಷರ ಭೇಟಿ; ದೇಶಪಾಂಡೆ ಸ್ಟಾರ್ಟಪ್ ಕಾರ್ಯಕ್ಕೆ ಶ್ಲಾಘನೆ

ಹುಬ್ಬಳ್ಳಿ: ಭವ್ಯ ಭಾರತದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಸಬಲೀಕರಣ ಮಹತ್ವದ ಗುರಿಯನ್ನು ಹೊಂದಿರುವ ದೇಶಪಾಂಡೆ ಸ್ಟಾರ್ಟಪ್ ಹತ್ತು ಹಲವು ಯೋಜನೆ ಮೂಲಕ ಜನಮನ್ನಣೆ ಪಡೆದಿದೆ. ಈಗ ಮತ್ತಷ್ಟು ಕೌಶಲಗಳನ್ನು ಮೈಗೂಡಿಸಿಕೊಂಡಿದ್ದು, ಮಹಿಳೆಯರ ಅಭಿವೃದ್ಧಿಗೆ ಅಡಿಪಾಯ ಹಾಕಲು ಮುಂದಾಗಿದೆ.

ಹುಬ್ಬಳ್ಳಿಯ ಶಿರೂರ್ ಪಾರ್ಕಿನಲ್ಲಿರುವ 'ಅಪ್ಪಟ ಕರ್ನಾಟಕ ರೂರಲ್ ಮಾರ್ಟ್ ಸ್ಟೋರ್' ಮಹಿಳೆಯರ ವೃತ್ತಿ ಕೌಶಲಗಳಿಗೆ ಹಿಡಿದಿರುವ ಕೈಗನ್ನಡಿಯಾಗಿದ್ದು, ದೇಶಪಾಂಡೆ ಸ್ಟಾರ್ಟಪ್ ಸಹಯೋಗದೊಂದಿಗೆ ಮಹಿಳೆಯರಲ್ಲಿರುವ ಕಲೆಯನ್ನು ಹಾಗೂ ಕೌಶಲಗಳನ್ನು ಅನಾವರಣ ಮಾಡುವಲ್ಲಿ ಯಶಸ್ವಿಯಾಗಿದ್ದು, ಕರಕುಶಲ, ಗೃಹ ಬಳಕೆಯ ವಸ್ತುಗಳು, ಮಾಸ್ಕ್, ಡಿಸೈನ್ ಡಿಸೈನ್ ಸೀರೆ ಹಾಗೂ ಮಹಿಳೆಯರ ಇಷ್ಟದ ಬಟ್ಟೆಗಳನ್ನು ತಯಾರು ಮಾಡುವ ಮೂಲಕ ಟ್ರೆಡಿಷನಲ್ ಟ್ರೆಂಡ್ ಮೂಲಕ ಹೊಸ ಆವಿಷ್ಕಾರ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಬಾರ್ಡ್ ಅಧ್ಯಕ್ಷ ಡಾ.ಜಿ.ಆರ್. ಚಿಂತಾಲಾ ಅವರು ಭೇಟಿ ನೀಡಿ ದೇಶಪಾಂಡೆ ಸ್ಟಾರ್ಟಫ್ ಸಹಯೋಗದ ಅಪ್ಪಟ ಕರ್ನಾಟಕ ರೂರಲ್ ಮಾರ್ಟ್ ಸ್ಟೋರಿಗೆ ಭೇಟಿ ನೀಡಿ ಕಾರ್ಯವೈಖರಿಯನ್ನು ವೀಕ್ಷಣೆ ಮಾಡಿದರು.

ಇನ್ನೂ ನಬಾರ್ಡ್ ಅಧ್ಯಕ್ಷರೊಂದಿಗೆ ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಗುರುರಾಜ ದೇಶಪಾಂಡೆ, ಸಿಇಒ ವಿವೇಕ ಪವಾರ್, ಡಿಡಿಎಂ ಮಯೂರ ಕಾಂಬಳೆ, ಸಿಜಿಎಂ ಟಿ.ರಮೇಶ ಕೂಡ ಆಗಮಿಸಿದ್ದು, ಅಪ್ಪಟ ಕರ್ನಾಟಕ ರೂರಲ್ ಮಾರ್ಟ್ ಬಗ್ಗೆ ಹಾಗೂ ದೇಶಪಾಂಡೆ ಸ್ಟಾರ್ಟಪ್‌ನ ಕೌಶಲ್ಯಗಳ ಬಗ್ಗೆ ನಬಾರ್ಡ್ ಅಧ್ಯಕ್ಷರಿಗೆ ಮಾಹಿತಿ ನೀಡಿದರು. ಇನ್ನೂ ಇದೇ ವೇಳೆ ಮಹಿಳೆಯರಿಗೆ ಮತ್ತಷ್ಟು ಕೌಶಲ್ಯವನ್ನು ನೀಡುವ ಸದುದ್ದೇಶದಿಂದ ಪೂರಕ ತರಬೇತಿ ನೀಡಲು ಮೂರು ಪ್ರಮುಖ ಪ್ರಾಜೆಕ್ಟ್‌ಗಳನ್ನು ಕೂಡ ಅನುಷ್ಠಾನಕ್ಕೆ ಅನುಮೋದನೆ ನೀಡಲಾಯಿತು.

ಒಟ್ಟಿನಲ್ಲಿ ಮಹಿಳೆಯರಿಗೆ ಮತ್ತಷ್ಟು ಕೌಶಲ್ಯ ತರಬೇತಿ ನೀಡುವ ಮೂಲಕ ಮಹಿಳಾ ಸ್ವಾವಲಂಬಿ ಬದುಕಿಗೆ ಅಡಿಪಾಯ ಹಾಕಲು ನಬಾರ್ಡ್ ಅಧ್ಯಕ್ಷ ನೇತೃತ್ವದಲ್ಲಿ ಮಹತ್ವದ ನಿರ್ಧಾರ ಮಾಡಿದ್ದು, ನಿಜಕ್ಕೂ ವಿಶೇಷವಾಗಿದೆ. ಮುಂಬರುವ ದಿನಗಳಲ್ಲಿ ದೇಶಪಾಂಡೆ ಸ್ಟಾರ್ಟಪ್‌ ಮಹಿಳಾ ಸಬಲೀಕರಣದಲ್ಲಿ ಮತ್ತೊಂದು ದಾಖಲೆ ಬರೆಯುವುದಂತೂ ಖಂಡಿತ.

Edited By : Manjunath H D
Kshetra Samachara

Kshetra Samachara

20/06/2022 03:13 pm

Cinque Terre

15.33 K

Cinque Terre

0

ಸಂಬಂಧಿತ ಸುದ್ದಿ