ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಪ್ರಪ್ರಥಮ ಬಾರಿಗೆ 'ಹುಬ್ಬಳ್ಳಿ ಉತ್ಸವ' ಆರಂಭವಾಗಿದ್ದು, ಇಲ್ಲಿ ಶಾಪಿಂಗ್, ಫನ್ ಆ್ಯಂಡ್ ಎಂಟರ್‌ಟೈನ್‌ಮೆಂಟ್ ಯಾವುದೇ ಕೊರತೆ ಇಲ್ಲ.
ಗವಿಯ ಮೂಲಕ 'ಹುಬ್ಬಳ್ಳಿ ಉತ್ಸವ'ಕ್ಕೆ ಎಂಟ್ರಿ ಕೊಡುವ ಜನರಿಗೆ ಕಲೆ, ತಂತ್ರಜ್ಞಾನ ಲೋಕ, ಅದ್ಭುತ ನಿರ್ಮಾಣಗಳು ಕಾಣಸಿಗುತ್ತವೆ. ಈ ಉತ್ಸವದಲ್ಲಿ ವಿಶೇಷ ಆಕರ್ಷಣೆ ಎಂದರೆ ರೋಬೋಟಿಕ್ ಪಕ್ಷಿಗಳ ಲೋಕ. ಪಕ್ಷಿಗಳ ಕಲರವ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಪ್ರೇಕ್ಷಕರಿಗೆ ಖುಷಿ ನೀಡುತ್ತದೆ. ಅಷ್ಟೇ ಅಲ್ಲದೆ ಇಲ್ಲಿನ ಸೆಲ್ಫಿ ಜೂನ್ ಮಸ್ತ್ ಮಜಾ ನೀಡುತ್ತದೆ.
ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ನಿಮಗೆ ಪ್ರಪಂಚದ ಅದ್ಭುತ ಕಟ್ಟಡಗಳಾದ ಬುರ್ಜ್ ಖಲೀಫಾ, ಬ್ರಿಟನ್ ಟವರ್, ಲಂಡನ್ ಬ್ರಿಡ್ಜ್, 50 ಅಡಿ ಎತ್ತರದ ಪ್ಯಾರಿಸ್ಸಿನ ಬೃಹತ್ ಐಫೆಲ್ ಟವರ್ ಮಾದರಿಗಳು ಕಾಣಸಿಗುತ್ತವೆ. ಇನ್ನು ನಟ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥವಾಗಿ ವಿಶೇಷ ಕೇಕ್ ಶೋ ಆಯೋಜಿಸಲಾಗಿದೆ. ಇಲ್ಲಿ ಅಪ್ಪು ಅವರ ಬಾಲ್ಯ ಸೇರಿದಂತೆ ಅಪರೂಪದ ಫೋಟೋ ಹೊಂದಿರುವ ಕೇಕ್‌ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಅಮ್ಯೂಜ್‌ಮೆಂಟ್ ಪಾರ್ಕ್ ನಲ್ಲಿ ಮಕ್ಕಳು ಹಾಗೂ ವಯಸ್ಕರಿಗಾಗಿ ಮಸ್ತ್ ಎಂಟರ್‌ಟೈನ್‌ಗಾಗಿ ಜ್ವಾಯಿಂಟ್ ವೀಲ್, ಬ್ರೇಕ್ ಡಾನ್ಸ್, ಕೊಲಂಬಸ್, ಟೋರ ಟೋರ, ಕ್ಯಾಟರ್ ಪ್ಲೇಯರ್, ಬೌನ್ಸ್, ಪ್ಲೇನ್, ಸ್ಕ್ಯಾರ್ಯ್ ಹೌಸ್, ಲಾಫಿಂಗ್ ಹೌಸ್, ಡ್ರಾಗನ್ ಟ್ರೈನ್, ಮಹಾರಾಜಾ ಟ್ರೈನ್, ವಾಟರ್ ಬೋಟ್ ಹಾಗೂ ಧೂಮ್ ಬೈಕ್ ಆಟಗಳಿವೆ.
ಇನ್ನು ಮಾರಾಟ ಮಳಿಗೆಗಳಾದ ಹ್ಯಾಂಡ್ಲೂಮ್ ಕ್ರಾಫ್ಟ್, ಗೃಹಪಯೋಗಿ ವಸ್ತುಗಳು, ಸಿದ್ಧ ಉಡುಪುಗಳು, ಫರ್ನಿಚರ್‌ಗಳು ನಿಮಗಾಗಿ ಕಾದಿವೆ. ಅಷ್ಟೇ ಅಲ್ಲದೆ ಪಾನಿಪುರಿ, ಗೋಬಿ ಮಂಚುರಿ, ಸೇವ್ ಪುರಿ ಸೇರಿದಂತೆ ವಿವಿಧ ಆಹಾರ ಮಳಿಗೆಗಳಲ್ಲಿ ನಿಮಗೆ ಇಷ್ಟವಾದ ಖಾದ್ಯದ ರುಚಿ ಸವಿಯಬಹುದಾಗಿದೆ.
ಇಂತಹ ಅದ್ಭುತ ಮನೋರಂಜನ ಉತ್ಸವವು ಹುಬ್ಬಳ್ಳಿಯ ಹೊಸೂರಿನ ಹೊಸ ಕೋರ್ಟ್ ಹಿಂಭಾಗದಲ್ಲಿ ಪ್ರತಿದಿನ ಸಂಜೆ 5:30ರಿಂದ ಶುರುವಾಗುತ್ತದೆ. ಮರೆಯದೆ ಇಂದೇ ನಿಮ್ಮ ಕುಟುಂಬ ಸಮೇತ ಭೇಟಿ ಕೊಟ್ಟು ಫುಲ್ ಎಂಜಾಯ್ ಮಾಡಿ.
Kshetra Samachara
04/05/2022 07:53 pm