ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಊರ ತುಂಬ ಪ್ಲಾಸ್ಟಿಕ್ ತಮಟೆ ಸದ್ದು-ಬೇಕಿದೆ ಚರ್ಮಕಾರನ‌ ನೋವಿಗೆ ಮದ್ದು

ವರದಿ: ವಿನೋದ ಇಚ್ಚಂಗಿ

ನವಲಗುಂದ : ಹೋಳಿ ಹುಣ್ಣಿಮೆ ಬಂತು ಎಲ್ಲೆಲ್ಲೂ ಹಲಗೆ ಸದ್ದು ಮಾರ್ದನಿಸುತ್ತಿದೆ. ಯುವಕರು, ಮಕ್ಕಳ ಕೈಯಲ್ಲಿ ಹಲಗೆ ಸದ್ದು ಮಾಡಲು ಆರಂಭಿಸುತ್ತಿದೆ. ಇಂತಹ ಪ್ರಮುಖ ಆಕರ್ಷಣೆಯ ಚರ್ಮದ ಹಲಗೆಯ ತಯಾರಕರು ಏನೆಲ್ಲಾ ಸಮಸ್ಯೆಗಳ ಸುಳಿಯಲ್ಲಿದ್ದಾರೆ. ಹಾಗೂ ಹೇಗೆಲ್ಲಾ ಹಲಗೆ ತಯಾರಿಸುತ್ತಾರೆ ಎನ್ನುವ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಎಸ್..! ಹೋಳಿ ಹುಣ್ಣಿಮೆ ಬಂತು ಅಂದ್ರೆ ಹಲಗೆ ಸದ್ದು ಕಿವಿ ಮೇಲೆ ಬೀಳಲಾರಂಭಿಸುತ್ತದೆ.ಆದರೆ, ಇತ್ತೀಚಿಗೆ ಚರ್ಮದ ಹಲಗೆ ಜಾಗದಲ್ಲಿ ಫೈಬರ್‌, ಪ್ಲಾಸ್ಟಿಕ್‌ ತಮಟೆ ಸದ್ದು ಮೊಳಗುತ್ತಿದೆ. ಇಷ್ಟೆಲ್ಲಾ ಸ್ಪರ್ಧೆಯ ಹಾಗೂ ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಯಿಂದ ಕುಂಠಿತವಾದ ವ್ಯಾಪಾರದ ನಡುವೆಯೂ, ಚರ್ಮದ ತಮಟೆ ತಯಾರಕರು ತಮ್ಮ ವೃತ್ತಿಯನ್ನು ಕೈಬಿಡದೆ ಮುಂದುವರೆದಿದ್ದಾರೆ.

ಇಷ್ಟೆಲ್ಲಾ ಸಂಕಷ್ಟದ ನಡುವೆ ಈಚೆಗೆ ಚರ್ಮದ ಹಲಗೆ ಸಪ್ಪಳ ಅಷ್ಟಕ್ಕಷ್ಟೇ ಎನ್ನುವಂತಾಗಿದೆ. ಕೋವಿಡ್ ನಿಂದ ಬಳಲಿ ಬೆಂಡಾದ ಚರ್ಮದ ಹಲಗೆ ತಯಾರಕರಿಗೆ ಲಾಕ್ ಡೌನ್ ಪರಿಹಾರ ಧನವೂ ಸಹ ಕೈಗೆ ಬಂದಿಲ್ವಂತೆ. ಸರ್ಕಾರಿ ಕಚೇರಿಗೆ ಅಲೆದು, ಅರ್ಜಿ ಹಾಕಿ ಬೇಸತ್ತ ತಯಾರಕರು ಈಗ ಬರಿಗೈನಲ್ಲಿ ನಿಲ್ಲುವಂತಾಗಿದೆ.

ಒಟ್ಟಾರೆಯಾಗಿ ನಮ್ಮ ದೇಶದಲ್ಲಿ ಪೂರ್ವಿಕರ ಕಾಲದಿಂದಲೂ ಉಪಯೋಗಿಸುತ್ತಾ ಬರುತ್ತಿರುವ ಚರ್ಮದ ಹಲಗೆ ಬಳಕೆ ಕಡಿಮೆ ಆಗಿದೆ. ಇದರ ಬಗ್ಗೆ ಸರ್ಕಾರವು ಕೊಂಚ ಗಮನ ಹರಿಸಿ, ಹಲಗೆ ತಯಾರಕರಿಗೆ ಪ್ರೋತ್ಸಾಹಧನ ನೀಡಬೇಕಿದೆ.

Edited By :
Kshetra Samachara

Kshetra Samachara

07/03/2022 05:21 pm

Cinque Terre

34.76 K

Cinque Terre

0

ಸಂಬಂಧಿತ ಸುದ್ದಿ