ಹುಬ್ಬಳ್ಳಿ: ಮಹಾನಗರ ಚಿಕನ್ ವ್ಯಾಪಾರಸ್ಥರ ಸಂಘ ಹಾಗೂ ಹುಬ್ಬಳ್ಳಿ ಪೌಲ್ಟ್ರಿ ಡೀಲರ್ಸ್ ಅಸೋಸಿಯೇಷನ್ ಈಗ ಮಹತ್ವದ ನಿರ್ಧಾರ ಕೈಗೊಂಡಿದೆ. ಎಲ್ಲದಕ್ಕೂ ಮಹಾನಗರ ಪಾಲಿಕೆ ಮೇಲೆ ಅವಲಂಬನೆ ಆಗುವುದು ಬೇಡ ಎಂಬ ಧ್ಯೇಯದೊಂದಿಗೆ, ನಾಲ್ಕು ಕಸದ ವಾಹನ ಖರೀದಿ ಮಾಡಿ ಈಗ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅಷ್ಟಕ್ಕೂ ಆ ವಾಹನ ಹೇಗಿದೇ ಹಾಗೂ ಎಲ್ಲಿ ಇದನ್ನು ಉಪಯೋಗ ಮಾಡುತ್ತಾರೆ ಎಂಬುದನ್ನಾ ತೋರಸ್ತೆವಿ ನೋಡಿ....
ಹೌದು.... ಚಿಕನ್ ವ್ಯಾಪಾರಸ್ಥರ ಸಂಘದಿಂದ ಇಂದು ನಗರದ ಆರ್.ಎನ್ ಶೆಟ್ಟಿ ಕಲ್ಯಾಣ ಪಂಟಪದಲ್ಲಿ 2022 ನೇ ವಾರ್ಷಿಕ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮವನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್, MLA ಪ್ರಸಾದ ಅಬ್ಬಯ್ಯ, ಪಾಲಿಕೆ ಆಯುಕ್ತರಾದ ಡಾ. ಬಿ ಗೋಪಾಲಕೃಷ್ಣ, ಪಾಲಿಕೆ ವೈದ್ಯಾಧೀಕಾರಿ ಡಾ. ಶ್ರೀಧರ ದಂಡೆಪ್ಪನವರ, ಮಹಮ್ಮದ ಜಾಫರ್, ಆರೀಪ್ ಬಾವಾ, ಅಧ್ಯಕ್ಷರಾ ಅಲ್ತಾಪ್ ಅಹ್ಮದ ಬೇಪಾರಿ, ಮಾಜಿ ಅಧ್ಯಕ್ಷ ನಾಗರರಾಜ ಪಟ್ಟಣ, ಕಾರ್ಯದರ್ಶಿ ಮಹಮ್ಮದ ಜಾಫರ್ ತಡಸ್, ಉಪಾಧ್ಯಕ್ಷರಾದ ಸಲೀಂ ಮಿಶ್ರಿಕೋಟಿ, ಖಜಾಂಚಿ ಹುಸೇನ್ ಇನಸುಮಿಯಾನವರ, ಉಪ ಕಾರ್ಯದರ್ಶಿ ಫೈರೋಜ್ ಖಾನ್ ಬೆಳಗಾಮ್, ಉಪ ಕಾರ್ಯದರ್ಶಿ ಮಹಮ್ಮದ ಅಲಿ ಕಮಡೊಳ್ಳಿ ಅವರು ಉದ್ಘಾಟನೆ ಮಾಡಿದರು.
ಇನ್ನು ಹುಬ್ಬಳ್ಳಿ ನಗರದಲ್ಲಿ 400 ಹೆಚ್ಚು ಚಿಕನ್ ಅಂಗಡಿಗಳಿವೆ. ಇನ್ನು ಅವರ ಕೋಳಿ ಕತ್ತರಿಸಿದ ಮೇಲೆ ಆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಕುವುದು ಬೇಡಾ, ಮತ್ತು ಮಹಾನಗರ ಪಾಲಿಕೆ ವಾಹನ ಬರುವ ತನಕ ತಡೆಯಬೇಕಿತ್ತು. ಆದರೆ ಅದಕ್ಕೆ ಈಗ ಪುಲ್ ಸ್ಟಾಪ್ ಇಟ್ಟು, ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳ ಸಹಕಾರದೊಂದಿಗೆ ಮಹಾನಗರ ಚಿಕನ್ ವ್ಯಾಪಾರಸ್ಥರ ಸಂಘ ಹಾಗೂ ಹುಬ್ಬಳ್ಳಿ ಪೌಲ್ಟ್ರಿ ಡೀಲರ್ಸ್ ಅಸೋಸಿಯೇಷನ್ ಇಟಾಜ್ ವೆಂಚರ್ಸ್ ಅವರೊಂದಿಗೆ ಕೈ ಜೋಡಿಸಿ, ನಾಲ್ಕು ಕಸದ ವಾಹನ ಸಜ್ಜು ಮಾಡಿಕೊಂಡು ಸ್ವಚ್ಚ ಭಾರತಕ್ಕೆ ಕೈ ಜೋಡಿಸಿದ್ದಾರೆ....
ಇನ್ನು ಪ್ರತಿಯೊಂದು ವಾಹನದಲ್ಲಿ 20 ಕ್ಕೂ ಹೆಚ್ಚು ಕಸದ ಡ್ರಮ್‌ಗಳನ್ನು ಅಳವಡಿಸಿದ್ದು, ಪ್ರತಿ ದಿನ ಬೆಳಗ್ಗೆ ಮತ್ತು ಸಾಯಂಕಾಲ ಹುಬ್ಬಳ್ಳಿಯಲ್ಲಿರುವ ಚಿಕನ್ ಅಂಗಡಿಗಳಿಗೆ ತೆರಳಿ ಕಸವನ್ನು ಕಲೆಕ್ಟ್ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಈ ಕಸವನ್ನು ರೀ ಪ್ರೋಟಿನ್ ಮಾಡಿ ಮೀನುಗಳಿಗೆ ಆಹಾರವಾಗಿ ಕನ್ವರ್ಟ್ ಮಾಡಲಾಗುತ್ತದಂತೆ...
ಇನ್ನು ವಾಣಿಜ್ಯ ನಗರಿ ಹುಬ್ಬಳ್ಳಿ ದಿನೆ ದಿನೆ ಬೆಳವಣಿಗೆಯಾಗುತ್ತಿದೆ. ಇವೆಲ್ಲ ಜವಾಬ್ದಾರಿಯನ್ನು ಮಹಾನಗರ ಪಾಲಿಕೆ ಜವಾಬ್ದಾರಿ ಹೊಂದಿರುತ್ತದೆ. ಆದ್ರೆ ಚಿಕನ್ ವ್ಯಾಪಾರಸ್ಥರು ತಮ್ಮ ತ್ಯಾಜ್ಯವನ್ನು ತಾವೆ ಸಂಗ್ರಹಿಸುವ ಮಹತ್ತರ ಕೆಲಸ ಮಾಡುತ್ತಿದೆ. ಅಷ್ಟೇ ಅಲ್ಲದೆ ಆ ತ್ಯಾಜ್ಯವನ್ನು ಮರುಕ್ರಿಯೆ ಮಾಡಿ ಪ್ರೋಟಿನ್ ತಯಾರಿಸುತ್ತಿರುವುದು ಒಳ್ಳೆಯ ಸಂಗತಿ ಎಂದು ಶಾಸಕ ಪ್ರಸಾದ ಅಬ್ಬಯ್ಯ ಅವರು ಮತ್ತು ಪಾಲಿಕೆ ಆಯುಕ್ತರಾದ ಡಾ. ಬಿ ಗೋಪಾಲಕೃಷ್ಣ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ನಲ್ಲಿ ಚಿಕನ್ ವ್ಯಾಪಾರಸ್ಥರು ಮಹಾನಗರ ಪಾಲಿಕೆ ಕೆಲಸಕ್ಕೆ ತಮ್ಮ ಕೈ ಜೋಡಿಸುತ್ತಿದೆ. ಇನ್ಮುಂದೆ ಚಿಕನ್ ವ್ಯಾಪಾರಸ್ಥರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಒಂದಡೆ ಸಂಗ್ರಹ ಮಾಡಿ. ನಿಮ್ಮ ಸದಾ ಸೇವೆ ವ್ಯಾಪಾರಸ್ಥರ ಸಂಘ ನಿರಂತರ ಸೇವೆ ನೀಡಲು ಮುಂದಾಗಿದೆ...
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/09/2022 01:09 pm