ಹುಬ್ಬಳ್ಳಿ: ನಿರ್ದಿಷ್ಟ ಗುರಿ, ಛಲ, ವೃತ್ತಿ ನಿಷ್ಠೆ ಹಾಗೂ ಪ್ರಾಮಾಣಿಕ ಪ್ರಯತ್ನವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ನಗರದ ಗೋಕುಲ್ ರಸ್ತೆಯ ಸಾಲಿಮಠ ಇಂಜಿನಿಯರ್ಸ್ ಜ್ವಲಂತ ನಿದರ್ಶನ.
ತಮ್ಮ ನಿರಂತರ ಪರಿಶ್ರಮದಿಂದ ಉದ್ಯಮದಲ್ಲಿ ಸಾಧನೆ ಮಾಡಿದ್ದಲ್ಲದೆ, ಸ್ವಯಂ ಉದ್ಯೋಗ ಮಾಡಬೇಕೆಂಬ ಇಚ್ಛೆಯುಳ್ಳ ಇತರರಿಗೂ ಮಾದರಿಯಾಗಿದ್ದಾರೆ ಸಾಲಿಮಠ ಇಂಜಿನಿಯರ್ಸ್ ದ ಗುರುಪಾದಯ್ಯ ಶಿವಾನಂದಯ್ಯ ಸಾಲಿಮಠ.
ಒಂದು ಉದ್ಯಮ ಆರಂಭಿಸಿ ಗ್ರಾಹಕರಿಗೆ ನಾವು ಯಾವ ಉತ್ಪನ್ನ ನೀಡಬಹುದು ಎನ್ನವುದಕ್ಕಿಂತ ಗ್ರಾಹಕರ ಅವಶ್ಯಕತೆ ಏನು? ಯಾವ ಉತ್ಪನ್ನಕ್ಕೆ ಬೇಡಿಕೆ ಇದೆ ಎಂಬುದನ್ನು ಅರಿತು ಯಾವುದೇ ಉದ್ಯಮ ಆರಂಭಿಸಿದರೂ ಅದರಲ್ಲಿ ಯಶಸ್ಸು ಕಾಣಬಹುದು ಎನ್ನುತ್ತಾರೆ ಸಾಲಿಮಠ.
ಇದೆ ಕಾರಣಕ್ಕೆ ಇಂದು ಸಾಲಿಮಠ ಇಂಜಿನಿಯರ್ಸ್, ಕರ್ನಾಟಕ ಸೇರಿ ಹೊರ ರಾಜ್ಯದ ಜನತೆಗೂ ಪರಿಚಿತವಾಗಿದೆ. ಇವರ ಯಶೋಗಾಥೆಯೇ ಕುತೂಹಲಕಾರಿಯಾಗಿದೆ. ವಿಜ್ಞಾನ ಪದವಿಧರರಾದ ಇವರು ಆಯ್ದುಕೊಂಡಿದ್ದು ಮೆಡಿಕಲ್ ರೆಪ್ರೆಜೆಟಿವ್ ವೃತ್ತಿ.
1990 ರಲ್ಲಿ ಅದಕ್ಕೂ ಶರಣು ಹೊಡೆದು ಸ್ವಂತ ಆಸ್ತಿ ಮಾರಾಟ ಮಾಡಿ ಅದೇ ವರ್ಷ ಆಟೋ ಮೊಬೈಲ್ ಕ್ಷೇತ್ರಕ್ಕೆ ಕಾಲಿಟ್ಟರು. ಹೈಡ್ರೋಲಿಕ್ ಸ್ಪೆಸಿಪಿಕ್ ಪೈಪ್ ಉದ್ಯಮ ಆರಂಭಿಸಿ, ಜೀವನ ಹಾಗೂ ವ್ಯವಹಾರೊದ್ಯಮ ಈ ಎರಡರಲ್ಲೂ ಗೆದ್ದವರೇ ಈ ಸಾಲಿಮಠ.
ಇವರು ಉದ್ಯಮ ಆರಂಭಿಸಿದಾಗ ಹುಬ್ಬಳ್ಳಿ ಧಾರವಾಡ ಬೈ ಪಾಸ್ ಕಾಮಗಾರಿ ನಡೆಯುತ್ತಿತ್ತು. ಅದೇ ಸಮಯವನ್ನು ಸದುಪಯೋಗ ಪಡಿಸಿಕೊಂಡು ಆಟೋ ಮೊಬೈಲ್ ಕ್ಷೇತ್ರಕ್ಕೆ ಏನು ಅವಶ್ಯಕತೆ ಇದೆ ಎಂಬುದನ್ನು ಅರಿತರು. ಅದಕ್ಕೆ ಪೂರಕವಾದ ಹೈಡ್ರೋಲಿಕ್ ಪೈಪ್ ಪೂರೈಕೆ ಮಾಡುತ್ತಾ ಬಂದರು. ಸಮಯದ ಅಭಾವ, ಕೆಲಸದ ಸಮಯದಲ್ಲಿ ಉಂಟಾಗುವ ತೊಂದರೆಗಳಿಗೆ ತಮ್ಮ ಉದ್ಯಮದ ಮೂಲಕ ಪರಿಹಾರ ಕೊಟ್ಟ ಸಾಲಿಮಠ ಇಂಜಿನಿಯರ್ಸ್ ಕೇವಲ ಹುಬ್ಬಳ್ಳಿ ಮಾತ್ರವಲ್ಲ ಗೋವಾ, ಹೊಸಪೇಟ್, ಕೊಪ್ಪಳ, ಬಳ್ಳಾರಿ ವರೆಗೂ ಚಿರಪರಿಚಿತರಾಗಿ ಉದ್ಯಮಕ್ಕೆ ಬಲ ನೀಡಿದರು.
ದೇಶಾದ್ಯಂತ ಲಾರಿ ಮುಷ್ಕರದ ಸಂದರ್ಭ ಗುರುಪಾದ ಸಾಲಿಮಠ ತಮ್ಮ ಕಾರಿನಲ್ಲೇ 10.000 ಕಿಲೋಮೀಟರ್ ದಾರಿ ಕ್ರಮಿಸಿ ನೇಪಾಳದಿಂದ ಹಿಡಿದು ಮಹಾರಾಷ್ಟ್ರ, ಛತ್ತಿಸಘಡ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ, ಒರಿಸ್ಸಾ, ಉತ್ತರಪ್ರದೇಶ, ವಿಶಾಖಪಟ್ಟಣ ಸುತ್ತಿ ಸರಿಯಾದ ಸಮಯಕ್ಕೆ ಆಟೋ ಮೊಬೈಲ್ ಸೇವೆ ನೀಡಿದರು. ಇವರ ಕರ್ತವ್ಯ ನಿಷ್ಠೆ ಸೇವಾ ತತ್ಪರತೆ ಮೆಚ್ಚಿ ವಿಪ್ರೋ ಕಂಪನಿ ಡಿಲರ್ಶಿಪ್ ನೀಡಿದ್ದು ಇವರ ಸಾಧನೆಗೆ ಸಾಕ್ಷಿ. ತದನಂತರ ಸ್ವಂತ ಉದ್ಯಮ ಪ್ರತೀಕವಾಗಿ ಸಾಲಿಮಠ ಇಂಜಿನಿಯರ್ಸ್ ತಲೆ ಎತ್ತಿತು..
ಆಟೋಮೊಬೈಲ್ ಕ್ಷೇತ್ರವಷ್ಟೇ ಅಲ್ಲಾ, ತಾವೂಮ್ಮೆ ಮೈಸೂರಿಗೆ ಭೇಟಿ ನೀಡಿ ರಾಯಲ್ ಎನ್ ಫಿಲ್ಡ್ ಬೈಕ್ ನೋಡಿ 2010 ರಲ್ಲಿ ಬೈಕ್ ಖರೀದಿಸಿ ಮೈಸೂರಿನಿಂದ ಹುಬ್ಬಳ್ಳಿಗೆ ಬರೋಬ್ಬರಿ 567 ಕಿಲೋ ಮೀಟರ್ ಪ್ರಯಾಣವನ್ನು ಕೇವಲ 8 ತಾಸಿನಲ್ಲಿ ಕ್ರಮಿಸಿ ಬುಲೆಟ್ ಬೈಕ್ ಪ್ರಯಾಣದ ಖುಷಿ ಸವಿದರು, ಹುಬ್ಬಳ್ಳಿ ಧಾರವಾಡದ ಜನತೆಗೆ ಮೊಟ್ಟ ಮೊದಲು ರಾಯಲ್ ಎನ್ ಫಿಲ್ಡ್ ಶೋ ರೂಮ್ ಡಿಲರ್ಶಿಪ್ ಪಡೆದು ಅಂದಿನಿಂದ ಇಂದಿನವರೆಗೂ ನಂ 1 ಸೇವೆ ಎಂದ್ರೇ ಅದು ಸಾಲಿಮಠ ಇಂಜಿನಿಯರ್ಸ್ ಮಾತ್ರ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಬುಲೆಟ್ ಬೈಕ್ ಮಾತ್ರವಲ್ಲದೆ ಎಲೆಕ್ಟ್ರಿಕ್ ಬೈಕ್, ಎಲೆಕ್ಟ್ರಿಕ್ ಸೈಕಲ್ ಹೀಗೆ ಸದಾ ಹೊಸ ಹೊಸ ಮಾದರಿಯನ್ನು ಜನರಿಗೆ ಪರಿಚಯಿಸೋ ಗುರುಪಾದಯ್ಯ ಸಾಲಿಮಠ ಇಂದಿಗೂ ಯುವ ಉದ್ಯಮಿಗಳ ಆದರ್ಶ.
Kshetra Samachara
18/09/2021 06:00 pm