ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗಬ್ಬೂರ ಬಳಿ ಘರ್ಜಿಸಿದ ಜೆಸಿಬಿ ಡಬ್ಬಾ ಅಂಗಡಿ ಬ್ಯಾನರ್ ತೆರವು

ಹುಬ್ಬಳ್ಳಿ : ಅಕ್ರಮವಾಗಿ ಮದ್ಯ ಮಾರಾಟ ಜಾಲ ನಡೆಯುತ್ತಿದೆ ಎಂಬ ದೂರಿನ ಅನ್ವಯ ಹಾಗೂ ರಸ್ತೆ ಸಂಚಾರಕ್ಕೆ, ವಾಹನ ಪಾರ್ಕಿಂಗ್‌ಗೆ ಅಡೆತಡೆ ಉಂಟಾತ್ತಿದ್ದ ಹಿನ್ನೆಲೆಯಲ್ಲಿ ಗಬ್ಬೂರ ಬಳಿಯ ಅನಧಿಕೃತ ಡಬ್ಬಾ ಅಂಗಡಿ ಮತ್ತು ಬ್ಯಾನರ್‌ಗಳನ್ನು ಪೊಲೀಸರ ಸಹಕಾರದೊಂದಿಗೆ ಮಹಾನಗರ ಪಾಲಿಕೆ ಸಿಬ್ಬಂದಿ ತೆರವು ಗೊಳಿಸಿದ್ದಾರೆ.

ಪಾಲಿಕೆ ವಲಯ ಕಛೇರಿ-11 ರ ಸಹಾಯಕ ಆಯುಕ್ತ ಆನಂದ ಕಾಂಬ್ಳೆ ನೇತೃತ್ವದಲ್ಲಿ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಹಾಗೂ ಯಾವುದೇ ಕಾರಣಕ್ಕೂ ನಿಯಮ ಮೀರಿ ರಸ್ತೆ ಮೇಲೆ ಡಬ್ಬಾ ಅಂಗಡಿ ನಡೆಸದಂತೆ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

ಜೆಸಿಬಿ ಕಾರ್ಯಾಚರಣೆ ವೇಳೆ ಕೆಲ ಡಬ್ಬಾ ಅಂಗಡಿಗಳ ಮಾಲೀಕರು ಬಾರದ ಕಾರಣ ಕೆಲ ಡಬ್ಬಾಗಳನ್ನು ವಶಕ್ಕೆ ಪಡೆದರು. ಗಬ್ಬೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದ ಹೊಟೆಲ್, ಪಾನಶಾಪ್, ತಿಂಡಿ-ತಿನಿಸುಗಳ ಅಂಗಡಿಗಳನ್ನು ತೆರವು ಗೊಳಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ವಲಯ ಕಚೇರಿ-11ರ ಜ್ಯೂನಿಯರ್ ಇಂಜಿನಿಯರ್ ಜಸ್ಮೀತಾ ಸಂಗ್ರೇಶ ಕೊಪ್ಪ, ಆರೋಗ್ಯ ನಿರೀಕ್ಷಕ ಸಂತೋಷ ಪೊಲೀಸರು ಅಧಿಕಾರಿಗಳು ಸ್ಥಳದಲ್ಲಿದ್ದರು.

Edited By : Manjunath H D
Kshetra Samachara

Kshetra Samachara

21/09/2022 04:03 pm

Cinque Terre

26.34 K

Cinque Terre

5

ಸಂಬಂಧಿತ ಸುದ್ದಿ