ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೆಹ್ತಾ ಪರಿವಾರದಿಂದ ಮತ್ತೊಂದು ಸೀರೆ ಮಾರಾಟ ಮಳಿಗೆಗೆ ಚಾಲನೆ

ಧಾರವಾಡ: ಧಾರವಾಡದ ಪ್ರಸಿದ್ಧ ಮೆಹ್ತಾ ಪರಿವಾರದಿಂದ ಕಾಂಚನಾ ಎನ್.ಎಕ್ಸ್.ಸೀರೆ ಮಾರಾಟ ಮಳಿಗೆ ಎಂಬ ಮತ್ತೊಂದು ಮಳಿಗೆ ಪ್ರಾರಂಭಿಸಲಾಗಿದೆ.

ಧಾರವಾಡದ ಲೈನ್ ಬಜಾರ್ ರಸ್ತೆಯಲ್ಲಿರುವ ಹನುಮಾನ್ ದೇವಸ್ಥಾನದ ಹತ್ತಿರದ ಮಾತೋಶ್ರೀ ಲೈಫ್ ಸ್ಟೈಲ್ ಮಾಲ್ ನಲ್ಲಿ ಈ ಸೀರೆ ಅಂಗಡಿ ಶುಭಾರಂಭಗೊಂಡಿದೆ.

ಬಹುಭಾಷಾ ನಟಿ ಶ್ರೀಲೀಲಾ ಅವರು ಸೋಮವಾರ ಈ ಸೀರೆ ಮಾರಾಟ ಮಳಿಗೆಗೆ ಚಾಲನೆ ನೀಡಿದರು. ಈ ವೇಳೆ ಶಾಂತಿಲಾಲ್ ಮೆಹ್ತಾ, ಅರವಿಂದ ಮೆಹ್ತಾ ಹಾಗೂ ಸತೀಶ್ ಮೆಹ್ತಾ ಹಾಜರಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟಿ, ಶ್ರೀಲೀಲಾ, ಮೊದಲ ಬಾರಿಗೆ ಧಾರವಾಡಕ್ಕೆ ಬಂದಿದ್ದು ಬಹಳ ಖುಷಿಯಾಯಿತು. ಇಲ್ಲಿನ ಹವಾಮಾನ ನನಗೆ ಬಹಳ ಹಿಡಿಸಿತು ಎಂದರು.

Edited By :
Kshetra Samachara

Kshetra Samachara

19/10/2020 06:56 pm

Cinque Terre

31.75 K

Cinque Terre

8

ಸಂಬಂಧಿತ ಸುದ್ದಿ