ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: "ಹೆಸರಿ"ಗಷ್ಟೇ ಬೆಂಬಲ ಬೆಲೆ!; 12% ಬಾರದ ತೇವಾಂಶ ನಿಗದಿ, ಖರೀದಿ ಬಂದ್

ಕುಂದಗೋಳ : ಬೆಂಬಲ ಬೆಲೆ ಸಿಗುತ್ತೇ, ಅತಿವೃಷ್ಟಿ ನಡುವೆಯೂ ಕಷ್ಟ ಪಟ್ಟು ಬೆಳೆದ ಹೆಸರು ಬೆಳೆಗೆ ಸರ್ಕಾರ ಆರಂಭಿಸಿದ ಖರೀದಿ ಕೇಂದ್ರ ಅನುಕೂಲ ಆಗುತ್ತೆ ಎಂಬ ರೈತರ ವಿಶ್ವಾಸಕ್ಕೆ ಇಂದಿಗೂ ಖರೀದಿ ಕೇಂದ್ರ ಫಲ ನೀಡಿಲ್ಲ!

ಸೆಪ್ಟೆಂಬರ್ 1ರಿಂದ ಅರ್ಜಿ ಸ್ವೀಕಾರ ಆರಂಭಿಸಿದ ಹೆಸರು ಖರೀದಿ ಕೇಂದ್ರ ಅಕ್ಟೋಬರ್ ತಿಂಗಳು ಕಳೆಯುತ್ತಾ ಬಂದರೂ ಇಂದಿಗೂ ರೈತರಿಂದ ಹೆಸರು ಖರೀದಿ ಮಾಡಿಲ್ಲ! ಇದಕ್ಕೆ ಮುಖ್ಯ ಕಾರಣ ರೈತರು ಬೆಳೆದ ಹೆಸರು ಬೆಳೆ ತೇವಾಂಶವು ಸರ್ಕಾರ ನಿಗದಿ ಪಡಿಸಿದ 12% ಪ್ರತಿಶತ ಬಾರದೇ ಇರುವುದು.

ಸದ್ಯ, ನಿತ್ಯ ಹಲವಾರು ರೈತರು ಧೋ ಎಂದು ಸುರಿಯುವ ಮಳೆ ನಡುವೆ, ಪರಿಶ್ರಮ ಪಟ್ಟು ಹೆಸರು ಒಣಗಿಸಿದ್ರೂ ತೇವಾಂಶ ಮಾತ್ರ 12% ಪ್ರತಿಶತ ಬರ್ತಾ ಇಲ್ಲ. ಈ ಕಾರಣ ರೈತರು ಖರೀದಿ ಕೇಂದ್ರಕ್ಕೆ ಬರೋದು, ಚಪ್ಪಲಿ ಸವೆಸೋದು, ಪುನಃ ಮನೆ ಸೇರೋದಷ್ಟೇ ಆಗಿದೆ.

ಈಗಾಗಲೇ ಕುಂದಗೋಳ ಹೋಬಳಿ ಹೆಸರು ಖರೀದಿ ಕೇಂದ್ರಕ್ಕೆ 285 ಅರ್ಜಿ, ಯರಗುಪ್ಪಿ ಕೇಂದ್ರಕ್ಕೆ 427 ಅರ್ಜಿ ಸೇರಿ 712 ಅರ್ಜಿ ಬಂದರೂ ಅದರಲ್ಲಿ 12% ಪ್ರತಿಶತ ತೇವಾಂಶ ಬಂದಿರುವ ಹೆಸರು ಬೆಳೆದ ರೈತರ ಸಂಖ್ಯೆ ಮಾತ್ರ ಕೇವಲ 9! ಸದ್ಯ ಈ ಪ್ರಕ್ರಿಯೆ ಹೆಸರು ಖರೀದಿದಾರರಿಗೂ ಸಮಸ್ಯೆ ಆಗಿದೆ.

ಒಟ್ಟಾರೆ ಅತಿವೃಷ್ಟಿ, ಅಕಾಲಿಕ ಮಳೆ, ಮೋಡ ಮುಸುಕಿದ ವಾತಾವರಣದಲ್ಲಿ ರೈತ ಹೆಸರು ಬೆಳೆಯನ್ನು ಒಣಗಿಸಲಾಗದೆ ಸಾಲದ ಸುಳಿಯಲ್ಲಿದ್ದಾನೆ. ಆದ್ರೆ, ಸರ್ಕಾರ ಮಾತ್ರ ಖರೀದಿ ಕೇಂದ್ರ ತೆರೆದು ತೇವಾಂಶ ಎಂಬ ಲಕ್ಷ್ಮಣ ರೇಖೆ ಎಳೆದು ಖರೀದಿದಾರರು ಮತ್ತು ರೈತರ ನಡುವೆ ವಾಗ್ವಾದ ಸೃಷ್ಟಿಸಿ ಸುಮ್ಮನೆ ಕೂತಿದ್ದು, ರೈತರು ತೇವಾಂಶದ ಪ್ರತಿಶತ ಹೆಚ್ಚಿಸಲು ಒತ್ತಾಯ ಮಾಡ್ತಾ ಇದ್ದಾರೆ.

-ಪಬ್ಲಿಕ್ ನೆಕ್ಸ್ಟ್ ವಿಶೇಷ: ಶ್ರೀಧರ ಪೂಜಾರ

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/10/2022 01:56 pm

Cinque Terre

39.7 K

Cinque Terre

0

ಸಂಬಂಧಿತ ಸುದ್ದಿ