ಹುಬ್ಬಳ್ಳಿ: ಯಾವುದೇ ಹೊಸತನ ಇರಲಿ, ಯಾವುದೇ ಪ್ರಯೋಗ ಇರಲಿ, ಯಾವುದೇ ಕಾರ್ಯವೈಖರಿ ಇರಲಿ. ಅದು ಹೊಸ ಬದಲಾವಣೆಗೆ ಕಾರಣವಾಗುತ್ತೆ, ಲಾಭ ತಂದು ಕೊಡುತ್ತೇ ಎಂದ್ರೇ ಆ ಕರ್ತವ್ಯ ಎಲ್ಲರಿಗೂ ಇಷ್ಟವೇ ಸರಿ.
ಅಂತಹದ್ದೇ, ಒಂದು ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕಾರ್ಯವೈಖರಿ ಕೃಷಿಹೊಂಡ ನಿರ್ಮಾಣದ ಪ್ರಗತಿ ರೈತರ ಬಾಳಲ್ಲಿ ಬೆಳಕನ್ನು ಹರಿಸಿದೆ. ಹೊಸ ಆದಾಯ ಮತ್ತು ಕೃಷಿ ಬದುಕನ್ನು ವಾಣಿಜ್ಯೀಕರಣ ಮಾಡಿ ಇದೀಗ ಎಲ್ಲ ರೈತರು ನಮಗೊಂದು ಕೃಷಿಹೊಂಡ ಕೊಡಿ ಎನ್ನುತ್ತಿದ್ದಾರೆ.
ಆ ಪೈಕಿ ತಮ್ಮ ಸ್ನೇಹಿತ ನಿರ್ಮಿಸಿದ ಕೃಷಿಹೊಂಡದ ಲಾಭ, ಮೀನುಗಾರಿಕೆ ಫಲ, ಬೇಸಾಯದ ನಿವ್ವಳ ಆದಾಯ, ಧವಸ ಧಾನ್ಯ ಪೈರಿನ ಗುಣಮಟ್ಟ ನೋಡಿದ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ರೈತ ನಿಂಗಪ್ಪ ಗುರಶಿದ್ದಪ್ಪ ಮಡಿವಾಳರ ತಮ್ಮ 16 ಎಕರೆ ಜಮೀನಿಗೆ ನೆರವಾಗಲು 100/100 ಸುತ್ತಳತೆಯ ಕೃಷಿಹೊಂಡ ಬೇಕು ಎಂದು ದೇಶಪಾಂಡೆ ಫೌಂಡೇಶನ್ ಗೆ ಮನವಿ ಮಾಡಿದ್ದಾರೆ.
ಹಾಗಿದ್ರೇ... ಬನ್ನಿ, ರೈತ ನಿಂಗಪ್ಪ ಗುರುಶಿದ್ದಪ್ಪ ಮಡಿವಾಳರ ಕೃಷಿಹೊಂಡ ಕೇಳಿದ್ಯಾಕೆ ? ಅಷ್ಟೊಂದು ಬದಲಾವಣೆ ಇದೆಯಾ ? ಯಾವ ರೀತಿಯಲ್ಲಿ ಕೃಷಿಹೊಂಡ ಬೇಸಾಯಕ್ಕೆ ಪೂರಕ ಎಂಬಿತ್ಯಾದಿ ಅಭಿವೃದ್ಧಿ ಕುರಿತು "ಪಬ್ಲಿಕ್ ನೆಕ್ಸ್ಟ್" ರೈತ ನಿಂಗಪ್ಪನವರ ಜೊತೆ ನಡೆಸಿದ ಚಿಟ್ ಚಾಟ್ ಇಲ್ಲಿದೆ ನೋಡಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/09/2022 11:06 am