ಕುಂದಗೋಳ: ಅತಿವೃಷ್ಟಿ ನಡುವೆಯೂ ಹರಸಾಹಸ ಪಟ್ಟು ಕೊಂಚ ಹೆಸರು ಬೆಳೆ ಬೆಳೆದ ರೈತರಿಗೆ, ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಕೇಂದ್ರ ಆರಂಭ ಮಾಡಿ ಈಗಾಗಲೇ ಅರ್ಜಿ ಪಡೆಯಲು ಸೂಚಿಸಿದೆ.
ಆದ್ರೆ ಕುಂದಗೋಳದ ಹೆಸರು ಖರೀದಿ ಕೇಂದ್ರದ ಸನ್ನದುದಾರರಿಗೆ ಇಂದಿಗೂ ದತ್ತಾಂಶ ಸಂಗ್ರಹಿಸಿಲು ಕಂಪ್ಯೂಟರ್ ಯೂಸರ್ ಐಡಿ (ಹೆಸರು ಮತ್ತು ಪಾಸವರ್ಡ್) ನೀಡಿಲ್ಲ. ಈ ಕಾರಣ ಅರ್ಜಿ ಪ್ರಕ್ರಿಯೆ ಮತ್ತು ಹೆಸರು ಖರೀದಿ ಎರಡು ವಿಳಂಬವಾಗುವ ಸಾಧ್ಯತೆ ರೈತರನ್ನು ಕಾಡುತ್ತಿದೆ.
ಸೆಪ್ಟೆಂಬರ್ ಒಂದರಿಂದಲೇ ಹೆಸರು ಖರೀದಿ ಅರ್ಜಿ ಸ್ವೀಕಾರಕ್ಕೆ ಸರ್ಕಾರ 45 ದಿನ ಗಡುವು ನೀಡಿದ್ದು, ಅದರಲ್ಲಿ ಈಗಾಗಲೇ 8 ದಿನ ಮಾರುಕಟ್ಟೆ ಸನ್ನದುದಾರರಿಗೆ ಯೂಸರ್ ಐಡಿ ಇಲ್ಲದೆ ಕಳೆದು ಹೋಗಿದೆ.
ಸದ್ಯ ರೈತರ ಹಿತದೃಷ್ಟಿಯಿಂದ ಸನ್ನದುದಾರರು ಮೌಖಿಕ ಅರ್ಜಿ ಪಡೆಯುತ್ತಲಿದ್ರೂ, ಆ ಅರ್ಜಿ ದತ್ತಾಂಶ ಸಂಗ್ರಹಿಸಿ ರೈತರಿಗೆ ಪುನಃ ರಶೀದಿ ಸಂಖ್ಯೆ ಮತ್ತು ಖರೀದಿ ದಿನಾಂಕ ನೀಡಲು ತಾಂತ್ರಿಕ ಅಡಚಣೆ ಉಂಟಾಗಿದೆ.
ಈ ಕಾರಣ ಸೆಪ್ಟೆಂಬರ್ ಒಂದರಿಂದಲೇ ಹೆಸರು ಖರೀದಿ ಕೇಂದ್ರಕ್ಕೆ ಸರ್ಕಾರ ಅಸ್ತು ಎಂದರೂ, ಮೂಲ ಅವಶ್ಯಕತೆ ನೀಡದೆ ಇರುವುದು ರೈತರು ಹಾಗೂ ಸನ್ನದುದಾರರಿಗೆ ಸಮಸ್ಯೆ ಆಗಿ ಪರಿಣಮಿಸಿದೆ.
-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
Kshetra Samachara
08/09/2022 12:57 pm