ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕೃಷಿ ಚಟುವಟಿಕೆಗೆ ರೈತರ ವಿಶಿಷ್ಟ ವಿನ್ಯಾಸದ ಟ್ರಾಕ್ಟರ್

ನವಲಗುಂದ : ರೈತರು ತಮ್ಮ ಹೊಲಗಳಲ್ಲಿ ಎಡೆ ಹೊಡಿಯೋಕೆ, ಔಷಧಿ ಸಿಂಪಡಣೆ ಸೇರಿದಂತೆ ಹಲವು ಕೃಷಿ ಚಟುವಟಿಕೆಗಳಿಗಾಗಿ ಆಳುಗಳನ್ನು ಮತ್ತು ಎತ್ತುಗಳನ್ನು ಬಳಸಿಕೊಳ್ತಾರೆ. ಆಳುಗಳು ಸಿಕ್ರೆ ಅದೃಷ್ಟ ಸಿಗದೇ ಇದ್ರೆ ರೈತರ ಪಾಡು ಹೇಳತೀರದ್ದು, ಆದ್ರೆ ಈಗ ಕಾಲ ಬದಲಾಗಿದೆ ಅಂತಾನೆ ಹೇಳಬಹುದು ಯಾಕೆ ಅಂತೀರಾ ಈ ಸ್ಟೋರಿ ನೋಡಿ...

ಹೌದು ಹೊಲದಲ್ಲಿ ಎಡೆ ಹೊಡಿಯೋದ್ರಿಂದ ಹಿಡಿದು ಔಷಧಿ ಸಿಂಪಡಣೆ ಎಲ್ಲದಕ್ಕೂ ಉಪಯುಕ್ತ ಆಗುವ ಈ ವಿಶಿಷ್ಟ ರೀತಿಯಲ್ಲಿ ಮೋಡಿಫೈ ಮಾಡಲಾದ ಟ್ರಾಕ್ಟರ್ ಈಗ ರೈತನಿಗೆ ಸಾಕಷ್ಟು ಸಹಾಯಕವಾಗಿದೆ. ಇನ್ನು ಈ ಟ್ರಾಕ್ಟರ್ ಮೋಡಿಫೈ ಮಾಡಿಸಿ, ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವ ರೈತರುಗಳಾದ ನಾಗೇಶ ಬೆಂಡಿಗೇರಿ, ಮಹೇಶ ಹರಿವಾಳರ ಹೇಳೋದು ಆಳುಗಳಿಂದ ಔಷಧಿ ಸಿಂಪಡಣೆ ಮಾಡಿದ್ರೆ ಒಂದು ದಿನಕ್ಕೆ 5 ಎಕರೆ ಆಗುವುದು. ಆದ್ರೆ ಟ್ರಾಕ್ಟರ್ ನಿಂದ ಸುಮಾರು 30 ಎಕರೆ ವರೆಗೂ ಹೊಡೆಯಬಹುದು. ಅದರಲ್ಲೂ ಈ ಟ್ರಾಕ್ಟರ್ ನ ವಿಶೇಷತೆ ಅಂದ್ರೆ ಇದರ ಚಕ್ರ ಬೆಳೆ ಹಾಳಾಗಬಾರದು ಎಂಬ ಉದ್ದೇಶದಿಂದ ಈ ರೀತಿಯ ತೆಳ್ಳನೆಯ ಚಕ್ರ ಅಳವಡಿಸಲಾಗಿದೆ. ಇದರಿಂದ ಸಾಕಷ್ಟು ಸಮಯದ ಉಳಿತಾಯ ಕೂಡ ಆಗಲಿದೆ ಅಂತಾರೆ...

-ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Shivu K
Kshetra Samachara

Kshetra Samachara

10/11/2021 01:06 pm

Cinque Terre

12.81 K

Cinque Terre

4

ಸಂಬಂಧಿತ ಸುದ್ದಿ