ಸದೃಢ ಭಾರತ ನಿರ್ಮಾಣಕ್ಕೆ ನೈಸರ್ಗಿಕ ಕೃಷಿಯೇ ಭವಿಷ್ಯವಾಗಿದ್ದು, ಈ ಪದ್ಧತಿ ಉಳಿವಿಕೆಗಾಗಿ ಕೃಷಿಗೆ ಉತ್ತೇಜನ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ರೈತರು ಸಾಮಾನ್ಯ ಕೃಷಿ ಭೂಮಿಗಳಲ್ಲಿ ಹೆಚ್ಚಿನ ಆದಾಯಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ರೈತರಿಗೆ ಆಸರೆಯಾಗಿದೆ ದೇಶಪಾಂಡೆ ಫೌಂಡೇಶನ್.
ಹೌದು, ರೈತರು ಎಂದೆಂದಿಗೂ ದೇಶದ ಬೆನ್ನೆಲುಬಾಗಿದ್ದಾರೆ. ಆದರೆ ಜಮೀನಲ್ಲಿ ಎಷ್ಟೆಲ್ಲಾ ವ್ಯವಸಾಯ ಮಾಡಿದರೂ ರೈತರ ಆರ್ಥಿಕ ಪರಿಸ್ಥಿತಿ ಮಾತ್ರ ಸುಧಾರಿಸುತ್ತಿಲ್ಲ. ಕಾರಣ ಕೆಲವೊಮ್ಮೆ ಅತಿವೃಷ್ಟಿ, ಕೆಲವೊಮ್ಮೆ ಅನಾವೃಷ್ಟಿಗಳಿಂದ ಬೆಳೆ ನಾಶವಾಗುತ್ತಿರುವುದು ಸಾಮಾನ್ಯವಾಗಿದೆ.
ರೈತರ ಈ ಕಷ್ಟವನ್ನರಿತ ದೇಶಪಾಂಡೆ ಫೌಂಡೇಶನ್ ರೈತರಿಗೆ ಕೃಷಿಹೊಂಡ ನಿರ್ಮಿಸಿಕೊಳ್ಳಲು ಪ್ರೋತ್ಸಾಹ ನೀಡುತ್ತಿದೆ. ಇವರ ಸಹಕಾರದಿಂದ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದ 31 ವರ್ಷದ ರೈತ ಪ್ರದೀಪ ಹಿರೇಮಠ ತಮ್ಮ 12 ಎಕರೆ ಜಮೀನಿನಲ್ಲಿ 100 ಅಡಿ ಉದ್ದ 100 ಅಡಿ ಅಗಲ ಹಾಗೂ 12 ಅಡಿ ಆಳದ ಕೃಷಿಹೊಂಡ ನಿರ್ಮಿಸಿಕೊಂಡು ಉತ್ತಮ ಇಳುವರಿಯ ಬೆಳೆ ಬೆಳೆಯುತ್ತಿದ್ದಾರೆ.
ಬಿ.ಎ.ವ್ಯಾಸಾಂಗ ಪೂರೈಸಿ ಕೃಷಿ ಕಾರ್ಯ ಪ್ರಾರಂಭಿಸಿದ ಪ್ರದೀಪ್ ಬದುಕಲ್ಲಿ ಕೃಷಿಹೊಂಡ ತಂದ ಬದಲಾವಣೆ ಬಗ್ಗೆ ಸ್ವತಹ ಪ್ರದೀಪವರೆ ಮಾತನಾಡಿದ್ದಾರೆ ಕೇಳಿ..
ಮಳೆಯಾಶ್ರಿತ ಭೂಮಿಯಲ್ಲಿ ಕೃಷಿ ಹೊಂಡ ನಿರ್ಮಾಣದ ಪೂರ್ವದಲ್ಲಿ ಈರುಳ್ಳಿ, ಮೆಕ್ಕೆಜೋಳ,ಹೆಸರು,ಸೂರ್ಯಕಾಂತಿ ಬೆಳೆದ ರೈತ ವಾರ್ಷಿಕ 2 ರಿಂದ 2.5 ಲಕ್ಷ ಆದಾಯಗಳಿಸುತ್ತಿದ್ದ ಯಾವಾಗ ದೇಶಪಾಂಡೆ ಫೌಂಡೇಶನ್ ವತಿಯಿಂದ ಹೊಲದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡರೂ ಅಲ್ಲಿಂದ ಈ ರೈತನ ಶುಕ್ರದೆಸೆ ಶುರುವಾಗಿದೆ.
ಕೃಷಿಹೊಂಡ ನಿರ್ಮಾಣದ ಬಳಿಕ ಅದೇ ಜಮೀನಿನಲ್ಲಿ ರೈತ ವಾರ್ಷಿಕ ಬರೋಬ್ಬರಿ 5 ರಿಂದ 6 ಲಕ್ಷ ಆದಾಯಗಳಿಸುತ್ತಿದ್ದಾರೆ. ಮೊದಲಿನ ಬೆಳೆಗಳೊಂದಿಗೆ ಹೆಬ್ಬೇವು, ವಿವಿಧ ತರಕಾರಿ ಬೆಳೆಯುತ್ತಿದ್ದಾರೆ. ಜೊತೆಗೆ ಕೃಷಿಹೊಂಡದಲ್ಲಿ ಮೀನುಸಾಕಾಣಿಕೆಯನ್ನು ಆರಂಭಿಸುವ ಯೋಚನೆಯಲ್ಲಿದ್ದಾರೆ.
ಒಟ್ಟಿನಲ್ಲಿ ರೈತನ ಬದುಕಿನಲ್ಲಿ ಉತ್ತಮ ಆದಾಯದ ಮೂಲವಾಗಿದೆ ಈ ಕೃಷಿ ಹೊಂಡ
Kshetra Samachara
01/03/2021 07:57 pm