ಕಲಘಟಗಿ:ತಾಲೂಕಿನ ಉತ್ತರಿ ಮಳೆಯಿಂದಾಗಿ ಸೋಯಾಬಿನ್ ಬೆಳೆ ಹೊಲದಲ್ಲಿಯೇ ಕೊಳೆತು, ರೈತರು ತತ್ತರಿಸಿದ್ದಾರೆ . ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿ ತಾಲೂಕಿನ ರೈತರದ್ದಾಗಿದೆ. ಅತೀಯಾದ ಮಳೆಯಿಂದ ಸೋಯಾ ನಷ್ಟವಾಗಿದ್ದು,ರೈತರಲ್ಲಿ ಆತಂಕ ಉಂಟಾಗಿದೆ.
ಕಳೆದ ಎರಡು ಮೂರು ದಿನಗಳಿಂದ ಸುರಿದ ಉತ್ತರಿ ಮಳೆಗೆ ರೈತ ಬೆಳೆದ ಸೋಯಾ ಬೆಳೆ ಕೊಳೆತು ನಷ್ಟವಾಗಿದೆ.
ಸಾವಿರಾರು ಎಕರೆಯಲ್ಲಿ ಬೆಳೆಯಲಾದ ಕಟಾವು ಹಂತದಲ್ಲಿನ ಸೋಯಾ ಮಳೆಯಿಂದಾಗಿ ಹೊಲದಲ್ಲಿಯೇ ನಾಶವಾಗಿದೆ.ಇದರಿಂದ ರೈತರು ಅಪಾರವಾದ ನಷ್ಟ ಅನುಭವಿಸುವಂತಾಗಿದೆ.
Kshetra Samachara
23/09/2020 07:52 pm