ಹುಬ್ಬಳ್ಳಿ- ಧಾರವಾಡ ಜಿಲ್ಲೆಯಲ್ಲಿ ಸೈಕ್ಲೋನ್ ಎಫೆಕ್ಟ್ ನಿಂದಾಗಿ, ಹಿಂಗಾರು ಬೆಳೆ ಹತ್ತಿಯಲ್ಲಿ ತೇವಾಂಶ ಕಂಡ ಪರಿಣಾಮ, ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗಾಗಿದೆ. ಇದರಿಂದ ಬೆಲೆ ಕುಸಿತ ಕಾಣುವ ಸಾದ್ಯತೆ ಇದ್ದು ರೈತ ಕುಲ ಕಂಗಾಲಾಗುವಂತೆ ಮಾಡಿದೆ....
ಹೌದು,, ಮಳೆರಾಯನ ಆರ್ಭಟಕ್ಕೆ ಈ ಹಿಂದೆ ಮುಂಗಾರು ಕಳೆದುಕೊಂಡಿದ್ದ ರೈತರಿಗೆ, ಚಂಡಮಾರುತ ಬಿಸುತ್ತಿರುವ ಪರಿಣಾಮ, ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಜಿಟಿ ಜಟಿ ಮಳೆ ಬರುತ್ತಿದ್ದು ಇದರಿಂದಾಗಿ ಹಿಂಗಾರು ಬೆಳೆ ' ಹತ್ತಿಯಲ್ಲಿ ಹೆಚ್ಚಿನ ರೀತಿಯಲ್ಲಿ ತೇವಾಂಶ ಕಾಣುತ್ತಿರುವ ಪರಿಣಾಮ, ದೀಡಿರ್ ಬೆಲೆ ಕುಸಿಯುವ ಆತಂಕ ಹೆಚ್ಚಾಗಿದೆ. ಮೊದಲೆ ಮುಂಗಾರು ಕಳೆದುಕೊಂಡು ಕಂಗಲಾಗಿದ್ದ ರೈತರಿಗೆ ಸೈಕ್ಲೋನ್ ಶಾಕ್ ನೀಡಿದೆ
ಸದ್ಯದ ಪರಿಸ್ಥಿತಿಯಲ್ಲಿ ರೈತರಿಗೆ ಸೂರ್ಯನ ದರ್ಶನವಾಗಿ ಸೂರ್ಯನ ಕಿರಣಗಳು ಹತ್ತಿ ಮೇಲೆ ಬಿದ್ದರೆ ಮಾತ್ರ, ಎಂದಿನಂತೆ ಉತ್ತಮ ಬೆಲೆಗೆ ಹತ್ತಿ ಮಾರಾಟವಾಗುತ್ತೆ. ಇಲ್ಲವಾದರೆ ಸದ್ಯ ಕ್ವಿಂಟಲ್ ಗೆ 5400 ರೂ ಬೆಲೆ ಇದ್ದ ಹತ್ತಿ ದಿಡೀರ್ ಕುಸಿತವು ಕಾಣುವ ಸಾದ್ಯತೆ ಹೆಚ್ಚಾಗಿದ್ದು , ಇದೇ ರೀತಿ ಸೈಕ್ಲೋನ್ ಎಫೆಕ್ಟ್ ಮುಂದುವರೆದರೆ , ಸಂಪೂರ್ಣವಾಗಿ ಹತ್ತಿ ನಾಶವಾಗುತ್ತದೆ ಎಂಬ ಭಯದಲ್ಲಿ ರೈತರು ದಿನಗಳಿಯುತ್ತಿದ್ದಾರೆ.
Kshetra Samachara
29/11/2020 06:56 pm