ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿಯಲ್ಲಿ ಸಿಸಿಐ ಹತ್ತಿ ಖರೀದಿ ಕೇಂದ್ರ ಇಂದಿನಿಂದ ಆರಂಭ

ಅಣ್ಣಿಗೇರಿ : ಸ್ಥಳೀಯ ಎಪಿಎಂಸಿ ಆವರಣದಲ್ಲಿ ಭಾರತೀಯರು ಹತ್ತಿ ನಿಗಮದ ವತಿಯಿಂದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಹತ್ತಿ ಖರೀದಿ ಕೇಂದ್ರಕ್ಕೆ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಸೋಮವಾರ ಚಾಲನೆ ನೀಡಿದರು.

ರೈತರ ಸಂಕಷ್ಟಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿಯೊಬ್ಬ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಿಸಿಐ ಪ್ರಸಕ್ತ ಸಾಲಿನಲ್ಲಿ ಕಳೆದ ಸಾಲಿಗಿಂತ ಹೆಚ್ಚಿನ ಬೆಲೆಯಲ್ಲಿ ಹತ್ತಿ ಖರೀದಿ ಮಾಡುತ್ತಿದೆ. ಆದ್ದರಿಂದ ರೈತರು ಯಾವುದೇ ಭಯಪಡದೇ ನೇರವಾಗಿ ಸರ್ಕಾರದ ಜೊತೆ ವ್ಯವಹರಿಸಬಹುದು ಎಂದು ಮುನೇನಕೋಪ್ಪ ಹೇಳಿದರು.

ಜಿಲ್ಲಾಧಿಕಾರಿ ಡಾ. ನಿತೇಶ ಪಾಟೀಲ. ತಹಶಿಲ್ದಾರಗಳಾದ ಕೊಟ್ರೇಶ್ವರ ಗಾಳಿ.ನವೀನ ಹುಲ್ಲೂರ. ಸಿಸಿಐ ಅಧಿಕಾರಿ ರವಿಕುಮಾರ ನಾಯ್ಕ. ಮುಖ್ಯಾಧಿಕಾರಿ ಕೆ.ಎಫ್‌.ಕಟಗಿ. ಕಾರ್ಯದರ್ಶಿ ರಾಘವೇಂದ್ರ ಸಜ್ಜನರ ಹಾಗೂ ರೈತ ಮುಖಂಡರುಗಳು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

23/11/2020 07:41 pm

Cinque Terre

9.75 K

Cinque Terre

0

ಸಂಬಂಧಿತ ಸುದ್ದಿ