ಅಣ್ಣಿಗೇರಿ : ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರೈತ ಕುಲ ಈಗಾಗಲೇ ತಮ್ಮ ಮೈಮೇಲೆ ಬರೆ ಎಳೆದುಕೊಂಡಂತಾಗಿದೆ. ಇಂತಹ ಸಂದರ್ಭದಲ್ಲೂ ಮತ್ತೆ ಅದೇ ಗಾಯದ ಮೇಲೆ ಬರೆ ಎಳೆಯಲು ಮುಂದಾಗಿರುವ ಕಳ್ಳರ ಕರಾಮತ್ತು ತಾಲೂಕಿನ ಹಳ್ಳಿಗ್ರಾಮದಲ್ಲಿ ನಡೆದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ಹೌದು.. ಈ ಘಟನೆ ನಡೆದಿರುವುದು ತಾಲೂಕಿನ ಹಳ್ಳಿಕೇರಿ ಗ್ರಾಮದ ರೈತ ಶೇಖಪ್ಪ ಡಂಬಳ ಎಂಬುವವರ ಹೊಲದಲ್ಲಿ. ಮಳೆಯ ಹೊಡೆತಕ್ಕೆ ಸಿಕ್ಕು ಅಲ್ಪಸ್ವಲ್ಪ ಪ್ರಮಾಣದಲ್ಲಿ ಬಂದ ಶೇಂಗಾ ಬೆಳೆಯನ್ನು ಸ್ವಚ್ಛಗೊಳಿಸಿ ಮನೆಯಲ್ಲಿ ಜಾಗವಿಲ್ಲದ್ದರಿಂದ ತನ್ನ ಹೊಲದಲ್ಲಿಯೇ ಟ್ರ್ಯಾಕ್ಟ ರ್ ನ ಟೇಲರನಲ್ಲಿ ಸಂರಕ್ಷಣೆ ಮಾಡಿ ಅಲ್ಲಿಯೇ ವಾಸ್ತವ್ಯ ಮಾಡಲಾಗಿತ್ತು. ಆದರೆ ಮಂಗಳವಾರ ತಡರಾತ್ರಿ ಮಳೆ ಜೋರಾಗಿ ಬಂದದ್ದರಿಂದ ಅಲ್ಲಿ ವಾಸಿಸಲು ಅನಾನುಕೂಲವಾಗಿದ್ದರಿಂದ ಶೇಂಗಾ ಗಾಡಿಯನ್ನು ಅಲ್ಲಿಯೇ ಬಿಟ್ಟು ಮನೆಗೆ ಬಂದಿದ್ದರು.
ಬುಧವಾರ ಬೆಳಗಿನ ಜಾವ ಹೊಲದಲ್ಲಿ ಹೋಗಿ ನೋಡಿದರೆ ಅಲ್ಲಿದ್ದ ಶೇಂಗಾ ಕಳ್ಳರ ಪಾಲಾಗಿ ಹೋಗಿ ಬಿಟ್ಟಿವೆ. ಸುಮಾರು ಇಪ್ಪತ್ತು ಚೀಲಕ್ಕೂ ಹೆಚ್ಚು ಶೇಂಗಾ ಹಾಗೂ ಒಂದು ತಾಡಪತ್ರಿಯನ್ನು ಕಳುವು ಮಾಡಿದ್ದಾರೆ ಎಂದು ಶೇಖಪ್ಪ ಡಂಬಳ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.
Kshetra Samachara
14/10/2020 05:29 pm