ಹುಬ್ಬಳ್ಳಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರೋ ಭಾರಿ ಮಳೆಯಿಂದಾಗಿ ಮನೆಯೊಂದು ಏಕಾ ಏಕಿ ಕುಸಿದು ಬಿದ್ದಿದೆ. ಪರಿಣಾಮ ಮನೆಯವರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಹಳೇ ಹುಬ್ಬಳ್ಳಿಯ ಕೃಷ್ಣಾಪುರ ಓಣಿಯಲ್ಲಿ ನಡೆದಿದೆ.
ಕೃಷ್ಣಾಪುರ ಓಣಿಯ ನಿವಾಸಿ ಯಲ್ಲಮ್ಮ ಎಂಬವರಿಗೆ ಸೇರಿದ ಮನೆ ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ನೆನೆದು, ರಾತ್ರಿ 11ರ ಸುಮಾರಿಗೆ ಏಕಾಏಕಿ ಕುಸಿದು ಬೀಳುತ್ತಿದ್ದ ಶಬ್ದವನ್ನು ಕೇಳಿ ಮನೆಯವರು ಹೊರಗೆ ಬಂದು ಜೀವವನ್ನು ಉಳಿಸಿಕೊಂಡಿದ್ದಾರೆ.
ಕೂಡಲೇ ಮನೆಯ ಅಕ್ಕಪಕ್ಕದವರು ಯಲ್ಲಮ್ಮ ಅವರ ಮನೆಗೆ ದೌಡಾಯಿಸಿ ಮಣ್ಣಿನಡಿಯಲ್ಲಿ ಸಿಲುಕಿದ ಸಾಮಾನುಗಳನ್ನು ತೆಗೆದಿಡಲು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Kshetra Samachara
07/09/2022 10:57 am