ಕುಂದಗೋಳ : ಆಕಸ್ಮಿಕ ಬೆಂಕಿ ತಗುಲಿದ ಮನೆಯೊಂದಕ್ಕೆ ಬೆಂಕಿ ಹೊತ್ತಿ ಮನೆಯ ಒಳಗಿನ ಸಾಮಗ್ರಿಗಳು ಸುಟ್ಟು ಹೋದ ಘಟನೆ ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದಲ್ಲಿ ಇಂದು ಮಧ್ಯಾಹ್ನದ ಅವಧಿಯಲ್ಲಿ ನಡೆದಿದ್ದು ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.
ಹೌದು ! ಅಲ್ಲಾಪೂರ ಗ್ರಾಮದ ಅಶೋಕ್ ಭದ್ರಾಪೂರ, ಪ್ರಕಾಶ ಭದ್ರಾಪೂರ, ಯಲ್ಲಪ್ಪ ಭದ್ರಾಪೂರ ಎಂಬುವವರು ವಾಸವಿದ್ದ ಮನೆಗೆ ಬೆಂಕಿ ತಗುಲಿದ ಕಾರಣ ಮನೆಯಲ್ಲಿನ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿದ್ದು, ಮನೆಯ ಮೇಲ್ಚಾವಣಿ ಕಟ್ಪಿಗೆಗಳು ಸುಟ್ಟು ಹೋಗಿವೆ.
ತಕ್ಷಣ ವಿಷಯ ತಿಳಿದು ಗ್ರಾಮಸ್ಥರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದಾಗ ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿ ನಂದಿಸಿದ್ದಾರೆ.
Kshetra Samachara
04/12/2021 09:30 pm