ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಭೀಕರ ಅಪಘಾತ: ಇಬ್ಬರ ದುರ್ಮರಣ

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಧ್ಯೆ ಇರುವ ಬೈಪಾಸ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಧಾರವಾಡದ ಮೈಕ್ರೊ ಫಿನಿಶ್ ಕಂಪೆನಿ ಎದುರುಗಡೆಯೇ ಈ ಘಟನೆ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಬೈಕ್‌ ಮೇಲೆ ಬರುತ್ತಿದ್ದ ಇಬ್ಬರಿಗೆ ಎದುರಿಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್‌ನಲ್ಲಿದ್ದ ಇಬ್ಬರೂ ಸವಾರರು ಸ್ಥಳದಲ್ಲೇ ಅಸುನೀಗಿದ್ದಾರೆ.

ಮೃತಪಟ್ಟ ಇಬ್ಬರೂ ಯುವಕರು ಧಾರವಾಡದ ಹೊಸಯಲ್ಲಾಪುರದವರೆಂದು ತಿಳಿದು ಬಂದಿದ್ದು, ಇನ್ನೂ ಅವರ ಹೆಸರು ತಿಳಿದು ಬಂದಿಲ್ಲ. ಲಾರಿ ಡಿಕ್ಕಿಯಿಂದಾಗಿ ಓರ್ವ ಯುವಕನ ತಲೆಯೇ ಎರಡು ಹೋಳಾಗಿದೆ.

ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರು.

Edited By :
Kshetra Samachara

Kshetra Samachara

28/11/2021 06:38 pm

Cinque Terre

91.83 K

Cinque Terre

38

ಸಂಬಂಧಿತ ಸುದ್ದಿ