ಹುಬ್ಬಳ್ಳಿ: ಮುಂದೆ ಹೋಗುತ್ತಿದ್ದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ನರಳುತ್ತಿದ್ದ ಬೈಕ್ ಸವಾರನನ್ನು, ಉಪಚರಿಸಿ ಆಸ್ಪತ್ರೆಗೆ ರವಾನೆ ಮಾಡಿ ಮಾನವೀಯತೆ ಮೆರೆದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಎಲ್ಲರ ಗಮನ ಸೆಳೆದರು.
ಹುಬ್ಬಳ್ಳಿಯ ಹೊರವಲಯದಲ್ಲಿರುವ ತಾರಿಹಾಳ ಬೈಪಾಸ್ ಹತ್ತಿರ, ನಡೆದ ಲಾರಿ ಹಾಗೂ ಬೈಕ್ ಅಪಘಾತದಲ್ಲಿ ಬೈಕ್ ಸವಾರ ಆಯತಪ್ಪಿ ಹೈವೇ ಪಕ್ಕದ ರಸ್ತೆಯಲ್ಲಿ ಬಿದ್ದಿರುವ ಸಂದರ್ಭದಲ್ಲಿ, ಧಾರವಾಡಕ್ಕೆ ಹೊರಟಿದ್ದ ಸಚಿವರು ತಮ್ಮ ವಾಹನ ನಿಲ್ಲಿಸಿ ಬೈಕ್ ಸವಾರನಿಗೆ ನೀರಿನ ಬಾಟಲ್ ನೀಡಿ ಧೈರ್ಯ ಹೇಳಿ, ಸವಾರನ ಆರೋಗ್ಯ ವಿಚಾರಿಸಿದರು. ಸಚಿವ ಮುನೇನಕೊಪ್ಪ ಮಾನವೀಯತೆ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್ ಇದ್ದರು.
Kshetra Samachara
27/09/2021 03:28 pm