ಹುಬ್ಬಳ್ಳಿ : ಕುಡಿದ ಅಮಲಿನಲ್ಲಿ ಲಾರಿ ಚಾಲಕನೊಬ್ಬ ಬಿಆರ್ ಟಿಎಸ್ ಬಸ್ ನಿಲ್ದಾಣದ ಬ್ಯಾರಿಕೇಡ್ ಗೆ ಗುದ್ದಿದ ಘಟನೆ, ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದ ಮುಂದೆ ಗುರುವಾರ ತಡರಾತ್ರಿ ನಡೆದಿದೆ.
ಹೌದು,,,, ಲಾರಿ ಚಾಲಕ ಕುಡಿದ ಮತ್ತಿನಲ್ಲಿ ಒನ್ ವೆ ನಲ್ಲಿ ಬಂದು, ಹಳೆ ಬಸ್ ನಿಲ್ದಾಣದ ಮುಂದೆ ಇರುವ ಬಿಆರ್ಟಿಎಸ್ ನಿಲ್ದಾಣದ ಬ್ಯಾರಿಕೇಡ್ ಗೆ ಗುದ್ದಿದ್ದಾನೆ. ಸ್ಥಳದಲ್ಲಿದ್ದ ಸಾರ್ವಜನಿಕರು ಆ ಲಾರಿ ಚಾಲಕನನ್ನು ತಳಿಸಿ, ಕೂಡಲೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಕಾಟನ್ ಮಾರ್ಕೆಟ್ ಟ್ರಾಫಿಕ್ ಪೊಲೀಸರು ಲಾರಿ ಮತ್ತು ಚಾಲಕನನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಒಟ್ಟಿನಲ್ಲಿ ಬಾರಿ ಅನಾಹುತವೊಂದು ತಪ್ಪಿದೆ. ಈ ಕುರಿತು ಕಾಟನ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
10/09/2021 07:58 am