ಕುಂದಗೋಳ : ನಮಸ್ಕಾರ್ರೀ ಕುಂದಗೋಳ ಮಂದಿ ಇವತ್ತ್ ನಿಮ್ಮೂರು ರಸ್ತೆದಾಗ ಒಂದು ಟಾಟಾ ಎಸ್ ಗೂಡ್ಸ್ ಗಾಡಿ ಹಳ್ಳಕ್ಕೆ ವಾಲಿದ ಘಟನೆ ಇಂದು ಮಧ್ಯಾಹ್ನದಾಗ ನಡೆದೇತಿ ನೋಡ್ರಿ ಪಾ. ಅದೃಷ್ಟವಶಾತ್ ಯಾರಿಗೂ ಏನು ಆಗಿಲ್ಲಾ.
ಆದ್ರ ಟಾಟಾ ಏಸ್ ಬಿದ್ದಿದ್ದ ಎಲ್ಲೇ ಅಂದ್ರ ನಿಮ್ಮೂರು ರೈಲ್ವೆ ಟ್ರ್ಯಾಕ್ ಬ್ರಿಡ್ಜ್ ಕಾಮಗಾರಿ ಏನು ನಡದೇತಿ ಅಲ್ಲಾ ಅದೇ ಎಂಪಿಎಂಸಿ ಯಿಂದ ಕುರಬಗೇರಿ ಸಂಪರ್ಕ ಕಲ್ಪಿಸುವ ರಸ್ತೆದಾಗ ನೋಡ್ರಿ, ಎದುರಿಗೆ ಬರುತ್ತಿದ್ದ ಇನ್ನೋಂದು ವಾಹನಕ್ಕೆ ಜಾಗ ಬಿಡಲು ರಸ್ತೆ ಪಕ್ಕಕ್ಕೆ ಸರಿದ ಗೂಡ್ಸ್ ವಾಹನ ರಸ್ತೆ ಮಣ್ಣು ಕುಸಿದ ಪರಿಣಾಮ ಚರಂಡಿಗೆ ಬಿದ್ದಿದೆ.
ಸ್ಥಳಿಯರು ಗೂಡ್ಸ್ ವಾಹನಕ್ಕೆ ಹಗ್ಗ ಕಟ್ಟಿ ಎಳೆದು ಹರಸಾಹಸ ಮಾಡಿ ಹಳ್ಳಕ್ಕೆ ವಾಲಿದ ಗಾಡಿ ಮೇಲಿತ್ತ್ಯಾರ ಮತ್ತ್ ಈ ಘಟನೆ ಪರಿಣಾಮ ಬರೋಬ್ಬರಿ ಒಂದು ತಾಸ್ ಅರ್ಧ ತಾಸ್ ಟ್ರಾಫಿಕ್ ಜಾಮ್ ಆಗೇತಿ ಈ ಬಗ್ಗೆ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳು ಗಮನಿಸ್ರೀ ಪಾ ಈ ಪರಿಸ್ಥಿತಿ ನೋಡಿ ಆದ್ರೂ ಬ್ರಿಡ್ಜ್ ಕಾಮಗಾರಿ ಜಲ್ದಿ ಮುಗಸ್ರೀ.
Kshetra Samachara
05/09/2021 10:00 pm