ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಚಲಿಸುವ ಬಸ್ಸಿನಿಂದ ಜಿಗಿದ ಮಹಿಳೆಯರು

ಧಾರವಾಡ: ಚಲಿಸುವ ಬಸ್ಸಿನಿಂದ ಜಿಗಿದ ಮಹಿಳೆಯರಿಬ್ಬರು ಗಾಯಗೊಂಡ ಘಟನೆ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ನಡೆದಿದೆ.

ಸಾರಿಗೆ ಸಂಸ್ಥೆ ಬಸ್ಸು ನವಲಗುಂದ ಕಡೆಗೆ ಹೊರಟಿತ್ತು. ಇದರಲ್ಲಿ ಪ್ರಯಾಣಿಸುತ್ತಿದ್ದ ಈ ಮಹಿಳೆಯರು ಶಿವಳ್ಳಿ ಗ್ರಾಮಕ್ಕೆ ಇಳಿಯಬೇಕಿತ್ತು. ಶಿವಳ್ಳಿ ದಾಟಿದೆ ಎಂದು ತಿಳಿದ ಈ ಮಹಿಳೆಯರು ಚಲಿಸುತ್ತಿದ್ದ ಬಸ್ಸಿನಿಂದ ಇಳಿಯಲು ಯತ್ನಿಸಿ ಬಿದ್ದಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಕೂಡಲೇ ಆ ಮಹಿಳೆಯರ ಸಹಾಯಕ್ಕೆ ಧಾವಿಸಿದ್ದಾರೆ. ಬಸ್ಸಿನಿಂದ ಬಿದ್ದಿದ್ದರಿಂದ ಅವರ ತಲೆ ಹಾಗೂ ಕೈ, ಕಾಲಿಗೆ ಪೆಟ್ಟಾಗಿದೆ.

Edited By : Nirmala Aralikatti
Kshetra Samachara

Kshetra Samachara

23/02/2021 12:17 pm

Cinque Terre

80.49 K

Cinque Terre

19

ಸಂಬಂಧಿತ ಸುದ್ದಿ