ಧಾರವಾಡ: ಕಬ್ಬು ತುಂಬಿದ ಲಾರಿ ಹಾಯ್ದು ಬಾಲಕನೋರ್ವ ಸಾವನ್ನಪ್ಪಿದ ಘಟನೆ ಅಳ್ನಾವರ ತಾಲೂಕಿನ ಡೋರಿ ಗ್ರಾಮದಲ್ಲಿ ನಡೆದಿದೆ.
ಶಾನೂರ ಅಲ್ಲಾಭಕ್ಷ ನದಾಫ್ (8)ಎಂಬ ಬಾಲಕನೇ ಲಾರಿಯಡಿ ಸಿಲುಕಿ ಸಾವನ್ನಪ್ಪಿದವನು.
ಧಾರವಾಡದ ಶಿವಾನಂದ ದುರುಗಪ್ಪ ನೀಲಣ್ಣವರ ಎಂಬುವವರ ಮಾಲೀಕತ್ವದ ಹೊಲದಲ್ಲಿ ಲಾರಿ ಕಬ್ಬು ಹೇರಿಕೊಂಡು ಹೊರಟಿತ್ತು ಇದೇ ವೇಳೆ ಬಾಲಕ ಹೊಲಕ್ಕೆ ಬಂದಿದ್ದ. ಚಾಲಕನ ಅಜಾಗರೂಕತೆಯಿಂದ ಬಾಲಕನ ಮೇಲೆ ಲಾರಿ ಹಾಯ್ದಿದೆ.
ಈ ಸಂಬಂಧ ಅಳ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
27/01/2021 10:15 pm