ನವಲಗುಂದ : ನವಲಗುಂದ ಪಟ್ಟಣದ ಲಿಂಗರಾಜ ವೃತ್ತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಹೆದ್ದಾರಿ ಗಸ್ತಿನ ಪೊಲೀಸ್ ವಾಹನಕ್ಕೆ ಕಾರೊಂದು ಹಿಂಬದಿಯಿಂದ ಗುದ್ದಿದೆ. ಇದರಿಂದ ಎರಡು ವಾಹನಗಳಿಗೆ ಕೊಂಚ ಹಾನಿಯುಂಟಾಗಿದೆ.
ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿ ಚಾಲಕನ ಅಜಾಗರೂಕತೆಯ ಚಾಲನೆ ತಪ್ಪಿಸಲು ಹೋದ ಹೆದ್ದಾರಿ ಗಸ್ತಿನ ಪೊಲೀಸ್ ವಾಹನ ಏಕಾಏಕಿ ಬ್ರೇಕ್ ಹೊಡೆದಿದ್ದಾರೆ ಇದರಿಂದ ಹಿಂದೆ ಬರುತ್ತಿದ್ದ ಕಾರು ಹೆದ್ದಾರಿ ಗಸ್ತಿನ ಪೊಲೀಸ್ ವಾಹನಕ್ಕೆ ಗುದ್ದಿದೆ ಎನ್ನಲಾಗಿದೆ. ಇನ್ನು ಈ ಘಟನೆಯಿಂದ ಅರ್ಧ ಗಂಟೆಯವರೆಗೆ ಟ್ರಾಫಿಕ್ ಜಾಮ್ ಆಗಿತ್ತು.
Kshetra Samachara
17/01/2021 05:29 pm