ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹೆದ್ದಾರಿಯಲ್ಲಿ ಅಪಘಾತ; ಓರ್ವ ಸಾವು, ಇನ್ನೋರ್ವನಿಗೆ ಗಾಯ

ನವಲಗುಂದ ತಾಲೂಕಿನ ಯಮನೂರ ಅರೆಕುರಹಟ್ಟಿ ನಡುವೆ ಟ್ಯಾಂಕರ್ ಹಾಗೂ ಟಾಟಾ ಏಸ್ ನಡುವೆ ಶುಕ್ರವಾರ ಬೆಳ್ಳಂಬೆಳಿಗ್ಗೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಓರ್ವ ಮೃತ ಪಟ್ಟರೆ, ಗಾಯಗೊಂಡ ಇನ್ನೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಟ್ಯಾಂಕರ್ ಹುಬ್ಬಳ್ಳಿಯಿಂದ ಬಾಗಲಕೋಟ ಕಡೆ ಹಾಗೂ ಟಾಟಾ ಏಸ್ ವಾಹನ ನರಗುಂದದಿಂದ ಹುಬ್ಬಳ್ಳಿ ಕಡೆ ಬರುತ್ತಿತ್ತು ಎಂದು ಪ್ರಾಥಮಿಕ ಮಾಹಿತಿ ದೊರೆತಿದೆ.

ಮೃತ ದುರ್ದೈವಿಯನ್ನು ಶಿವಾನಂದ ಸಕ್ರಪ್ಪ ರಾಯನಾಯ್ಕರ ಎನ್ನಲಾಗುತ್ತಿದ್ದು, ಗಾಯಗೊಂಡ ರಮೇಶ ಯಲ್ಲಪ್ಪ ಕಂಡ್ರಿಯವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Edited By :
Kshetra Samachara

Kshetra Samachara

27/05/2022 11:36 am

Cinque Terre

56.68 K

Cinque Terre

0

ಸಂಬಂಧಿತ ಸುದ್ದಿ