ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಶಿರಕೋಳದಲ್ಲಿ ಹೊತ್ತಿ ಉರಿದ ಕಬ್ಬಿನ ಗದ್ದೆ

ನವಲಗುಂದ : ನವಲಗುಂದ ತಾಲೂಕಿನ ಶಿರಕೋಳ ಗ್ರಾಮದಲ್ಲಿ ಶುಕ್ರವಾರ ಮದ್ಯಾಹ್ನ ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ಹತ್ತಿದ ಕಾರಣ ಬೆಳೆದ ಅರ್ಧದಷ್ಟು ಕಬ್ಬು ಹೊತ್ತಿ ಉರಿದ ಘಟನೆ ನಡೆದಿದೆ.

ಇನ್ನೂ 5 ಎಕರೆಯಲ್ಲಿ ಬೆಳೆದ ಕಬ್ಬು ಹೊತ್ತಿ ಉರಿದಿದ್ದು, ಬಸವರಾಜ ಅಮ್ಮಿನಬಾವಿ ಎಂಬುವವರಿಗೆ ಸೇರಿದ ಗದ್ದೆ ಇದಾಗಿದೆ. ಇನ್ನೂ ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಬೆಂಕಿ ನಂದಿಸಲು ಮುಂದಾದರು ಸಹ ನಂತರ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಕಬ್ಬನ್ನು ಕಳೆದು ಕೊಂಡ ರೈತ ತಲೆ ಮೇಲೆ ಕೈ ಇಟ್ಟು ಕೂರುವಂತಾಗಿದೆ.

Edited By : Nagesh Gaonkar
Kshetra Samachara

Kshetra Samachara

06/11/2020 04:41 pm

Cinque Terre

44.99 K

Cinque Terre

1

ಸಂಬಂಧಿತ ಸುದ್ದಿ