ನವದೆಹಲಿ: ಭಾರತ ದೇಶದಲ್ಲಿ ಮಂಕಿಫಾಕ್ಸ್ ರೋಗದ ಒಂದೇ ಒಂದು ಕೇಸ್ ಪತ್ತೆ ಆಗಿಲ್ಲ. ಆದರೆ, ಮಂಕಿ ಫಾಕ್ಸ್ ಸೋಂಕಿನ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಈಗೊಂದು ಎಚ್ಚರಿಕೆ ಕೊಟ್ಟಿದೆ.
ಮಂಕಿಪಾಕ್ಸ್ ತ್ವರಿತಗತಿಯಲ್ಲಿಯೇ ಈಗ ಹರಡುತ್ತಿದೆ. ಮಕ್ಕಳಲ್ಲಿ ಈ ರೋಗ ಹೆಚ್ಚು ಕಂಡು ಬರುತ್ತಿದೆ. ಹಾಗಾಗಿಯೇ ಈ ರೋಗದ ಲಕ್ಷಣಗಳ ಮೇಲ್ವಿಚಾರಣೆ ನಡೆಸಬೇಕಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ.
ಭಾರತದಲ್ಲಿ ಈ ರೋಗದ ಒಂದೇ ಒಂದು ಕೇಸ್ ಪತ್ತೆ ಆಗಿಲ್ಲ. ಆದರೆ, ಸರ್ಕಾರ ಈ ಬಗ್ಗೆ ಈಗಲೇ ಎಚ್ಚರಿಕೆಯಿಂದಲೇ ಇದೆ ಎಂದು ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ಭಾರತದ ಆರೋಗ್ಯ ಸಾಧನಾ ಕಂಪನಿಯೊಂದು ಮಂಕಿಪಾಕ್ಸ್ ಸೋಂಕು ಪರೀಕ್ಷಿಸಲು ಆರ್ಟಿ ಪಿಸಿಆರ್ ಪರೀಕ್ಷಾ ಕಿಟ್ ರೆಡಿ ಮಾಡಿದೆ. ಒಂದು ಗಂಟೆಯಲ್ಲಿ ಈ ಕಿಟ್ ಮೂಲಕ ಫಲಿತಾಂಶ ನೀಡಲ ಸಾಧ್ಯವಾಗುತ್ತದೆ. 21 ದೇಶಗಳಲ್ಲಿ ಈಗಾಗಲೇ ಮಂಕಿಪಾಕ್ಸ್ ಹರಡಿದ್ದು ಈಗಾಗಲೇ 226 ಕೇಸ್ ಪತ್ತೆ ಆಗಿವೆ.
PublicNext
29/05/2022 03:27 pm