ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸತ್ತವನು ಮಾರ್ಚರಿಯಲ್ಲಿ ಬದುಕಿದ.!

ಲಕ್ನೋ: ಉತ್ತರ ಪ್ರದೇಶದ ಮೊರಾದಾಬಾದ್‌ನ ಜಿಲ್ಲಾ ಆಸ್ಪತ್ರೆಯ ವೈದ್ಯರು 40 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಘೋಷಿಸಿ ಶವಾಗಾರದ ಫ್ರೀಜರ್‌ನಲ್ಲಿ ಇರಿಸಿದ್ದರು. ಆದರೆ ಏಳು ಗಂಟೆಗಳ ನಂತರ ಆ ವ್ಯಕ್ತಿಯು ಚಲನಶೀಲತೆಯ ಲಕ್ಷಣಗಳನ್ನು ತೋರಿಸಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಹೌದು. ಮೊರಾದಾಬಾದ್‌ನಲ್ಲಿ ಪೌರಕಾರ್ಮಿಕ ಸಂಸ್ಥೆಯ ಎಲೆಕ್ಟ್ರಿಷಿಯನ್ ಶ್ರೀಕೇಶ್ ಕುಮಾರ್ ಹೀಗೆ ಪವಾಡ ರೀತಿ ಬದುಕುಳಿದ ವ್ಯಕ್ತಿ. ಗುರುವಾರ ರಾತ್ರಿ ಶ್ರೀಕೇಶ್ ಕುಮಾರ್‌ ಅವರಿಗೆ ವೇಗವಾಗಿ ಬಂದ ಬೈಕ್‌ವೊಂದು ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಶ್ರೀಕೇಶ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದರು. ಬಳಿಕ ಮರುದಿನ ಮರಣೋತ್ತರ ಪರೀಕ್ಷೆಗಾಗಿ ಅವರನ್ನು ಶವಾಗಾರದ ಫ್ರೀಜರ್‌ನಲ್ಲಿ ಇರಿಸಲಾಗಿತ್ತು.

ಸುಮಾರು ಏಳು ಗಂಟೆಗಳ ನಂತರ ಶವಪರೀಕ್ಷೆ ನಡೆಸಲು ಶ್ರೀಕೇಶ್ ಕುಟುಂಬಸ್ಥರಿಂದ ಪೊಲೀಸರು ಒಪ್ಪಿಗೆ ಪಡೆಯಲು ಬಂದಿದ್ದರು. ಈ ವೇಳೆ ಶ್ರೀಕೇಶ್ ಅವರ ಚಲನವಲನದ ಲಕ್ಷಣಗಳನ್ನು ಅತ್ತಿಗೆ ಮಧು ಬಾಲಾ ಗಮನಿಸಿದ್ದಾರೆ. ತಕ್ಷಣವೇ ಏರು ಧ್ವನಿಯಲ್ಲಿ, "ಅವನು ಸತ್ತಿಲ್ಲ, ನೋಡಿ ಇಲ್ಲಿ. ಅವನು ಏನನ್ನೋ ಹೇಳಲು ಬಯಸುತ್ತಿದ್ದಾನೆ, ಅವನು ಉಸಿರಾಡುತ್ತಿದ್ದಾನೆ" ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನು ಗಮನಿಸಿದ ವೈದ್ಯರು ಶ್ರೀಕೇಶ್ ಅವರನ್ನು ಚಿಕಿತ್ಸೆಗೆ ಒಳಪಡಿಸಿದ್ದಾರೆ. ಮೊರಾದಾಬಾದ್‌ನ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ ಶಿವ ಸಿಂಗ್ ಘಟನೆಯ ತನಿಖೆಗೆ ಆದೇಶಿಸಿದ್ದಾರೆ.

Edited By : Vijay Kumar
PublicNext

PublicNext

21/11/2021 01:06 pm

Cinque Terre

91.3 K

Cinque Terre

9