ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಿಗ್ಗೆ ವಾಕಿಂಗ್ ಬಂದವರಿಗೆಲ್ಲ ಬೇಯಿಸಿದ ಮೊಟ್ಟೆ ಕೊಟ್ಟರು: ಕಾರಣ ಗೊತ್ತಾ?

ಮೈಸೂರು: ಪ್ರತಿ ವರ್ಷ ಸೆಪ್ಟೆಂಬರ್ 2ನೇ ಶುಕ್ರವಾರ ಮೊಟ್ಟೆ ದಿನ ಆಚರಿಸಲಾಗುತ್ತದೆ. ಆದ್ರೆ ಮೈಸೂರಿನಲ್ಲಿ ಇವತ್ತು ಮೊಟ್ಟೆ ದಿನ ಆಚರಿಸಲಾಗಿದೆ. ನಗರದ ಕುಕ್ಕರಹಳ್ಳಿ ಕೆರೆ ಬಳಿ ಎನ್ಇಸಿಸಿ ಸಂಸ್ಥೆ ವತಿಯಿಂದ, ಮೊಟ್ಟೆ ದಿನ ಆಚರಿಸಲಾಯಿತು. ಮೊಟ್ಟೆ ದಿನದ ಅಂಗವಾಗಿ ಒಂದು ಸಾವಿರ ಮೊಟ್ಟೆಯನ್ನು ಬೇಯಿಸಿ ಉಚಿತವಾಗಿ ವಿತರಿಸಲಾಯಿತು ಎಂದು ಎನ್‌ಇಸಿಸಿ ಅಧ್ಯಕ್ಷ ಸತೀಶ್ ಬಾಬು ಹೇಳಿದ್ದಾರೆ.

ಬೆಳ್ಳಂಬೆಳಗ್ಗೆ ವಾಕ್ ಬಂದಿದ್ದ ಎಲ್ಲರಿಗೂ ಮೊಟ್ಟೆ ಜತೆಗೆ ಈರುಳ್ಳಿ, ಟೊಮೆಟೋ ವಿತರಿಸಲಾಯಿತು. ಉಚಿತವಾಗಿ ಸಿಕ್ಕ ಮೊಟ್ಟೆ ತಿಂದವರು ಸಂತೋಷಪಟ್ಟಿದ್ದಾರೆ. ಮೊಟ್ಟೆ ಆರೋಗ್ಯಕ್ಕೆ ಉತ್ತಮ ಪೌಷ್ಟಿಕಾಹಾರ. ಇದನ್ನು ಜನರಿಗೆ ತಿಳಿಸಲು ಮೊಟ್ಟೆ ದಿನ ಆಚರಿಸಲಾಯಿತು. ಈ ನಿಟ್ಟಿನಲ್ಲಿ ಮೊಟ್ಟೆಯಲ್ಲಿರುವ ಪೌಷ್ಟಿಕಾಂಶದ ವಿವರಗಳ ಬ್ಯಾನರ್ ಸಹಾ ಹಾಕಲಾಗಿತ್ತು. ಒಟ್ಟಾರೆ ಮೊಟ್ಟೆ ದಿನ ಜನರ ಗಮನ‌ ಸೆಳೆಯುವಲ್ಲಿ ಯಶಸ್ವಿಯಾಯಿತು.

Edited By : Nagaraj Tulugeri
PublicNext

PublicNext

08/10/2021 07:54 pm

Cinque Terre

63.48 K

Cinque Terre

2

ಸಂಬಂಧಿತ ಸುದ್ದಿ