ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ. ಪ್ರತಿನಿತ್ಯವೂ ಕ್ಯಾನ್ಸರ್ ನಿಂದಾಗಿ ಹಲವಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕ್ಯಾನ್ಸರ್ ನ ವಿವಿಧ ಬಗೆಗಳಲ್ಲಿ ಸ್ತನ ಕ್ಯಾನ್ಸರ್ ಕೂಡಾ ಒಂದು. ಸ್ತನ ಕ್ಯಾನ್ಸರ್ ಗೆ ಕಾರಣವಾಗುವ ಕೆಲವು ತಪ್ಪುಗಳನ್ನು ಕಡೆಗಣಿಸುವುದು ಒಳಿತು.
ವ್ಯಾಯಾಮ ಮಾಡದೆ ಇರುವುದು
ದೇಹದ ಆರೋಗ್ಯವನ್ನು ಕಾಪಾಡಲು ವ್ಯಾಯಾಮವು ಅತೀ ಅಗತ್ಯ. ದೈಹಿಕವಾಗಿ ಚಟುವಟಿಕೆ ಇಲ್ಲದೆ ಇದ್ದರೆ ಆಗ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಗೆ ಕಾರಣವಾಗಬಹುದು. ವಾರದಲ್ಲಿ 150 ನಿಮಿಷ ಕಾಲ ವ್ಯಾಯಾಮ ಮಾಡಿದರೂ ಅದು ಆರೋಗ್ಯಕ್ಕೆ ಒಳ್ಳೆಯದು.
ಆಲ್ಕೋಹಾಲ್ ಸೇವನೆ
ಆಲ್ಕೋಹಾಲ್ ಸೇವಿಸುವಂತಹ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಅಪಾಯವು ಹೆಚ್ಚಾಗಿ ಇರುವುದು. ಆಲ್ಕೋಹಾಲ್ ಹೊರತಾಗಿ ಧೂಮಪಾನ ಮತ್ತು ತಂಬಾಕಿನಿಂದಲೂ ದೂರವಿರಬೇಕು.
ಆಹಾರದ ಕಡೆಗಣನೆ
ಸಮತೋಲಿತ ಮತ್ತು ಆರೋಗ್ಯಕಾರಿ ಆಹಾರ ಸೇವನೆಯು ಅತೀ ಅಗತ್ಯ ಮತ್ತು ಇದು ಸ್ತನ ಕ್ಯಾನ್ಸರ್ ಅಪಾಯವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವುದು. ಅತಿಯಾಗಿ ಸಕ್ಕರೆ, ಸಂಸ್ಕರಿಸಿದ ಆಹಾರ ಮತ್ತು ಕೆಂಪು ಮಾಂಸವನ್ನು ಸೇವನೆ ಮಾಡಬಾರದು. ಇದರ ಬದಲಿಗೆ ಹಣ್ಣುಗಳು, ತರಕಾರಿಗಳು, ಕೊಬ್ಬಿನಾಂಶವಿರುವ ಮೀನು ಮತ್ತು ತೆಳು ಮಾಂಸ ಸೇವನೆ ಮಾಡಬೇಕು.
ಗರ್ಭನಿರೋಧಕ ಆಯ್ಕೆಯಲ್ಲಿ ನಿರ್ಲಕ್ಷ್ಯ
ಕೆಲವು ಹಾರ್ಮೋನ್ ಮತ್ತು ಗರ್ಭನಿರೋಧಕ ಚಿಕಿತ್ಸೆಯಿಂದಾಗಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯವು ಹೆಚ್ಚಾಗುವುದು. ಹಾರ್ಮೋನ್ ಮಾತ್ರೆಗಳು ದೇಹದಲ್ಲಿ ಹಲವಾರು ಬದಲಾವಣೆಗಳನ್ನು ಉಂಟು ಮಾಡುವುದು.
ಹೀಗಾಗಿ ಗರ್ಭನಿರೋಧಕ ಮಾತ್ರೆಗಳನ್ನು ಸೇವನೆ ಮಾಡುವ ವೇಳೆ ನೀವು ಮಾತ್ರೆಗಳನ್ನು ಕಡೆಗಣಿಸಿ ಮತ್ತು ಬೇರೆ ಆಯ್ಕೆ ನೋಡಿ.
ಬೊಜ್ಜು ಅಥವಾ ಅತಿಯಾದ ತೂಕ
ಆರೋಗ್ಯಕಾರಿ ತೂಕ ಕಾಪಾಡಿಕೊಳ್ಳುವುದು ಅತೀ ಅಗತ್ಯ. ಬೊಜ್ಜು ಬೆಳೆದಿದ್ದರೆ ಆಗ ಖಂಡಿತವಾಗಿಯೂ ಇದು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚು ಮಾಡುವುದು.
PublicNext
08/09/2021 06:23 pm