ಪೇರಳೆಹಣ್ಣು ಆರೋಗ್ಯಕ್ಕೆ ಉತ್ತಮ. ಈ ಹಣ್ಣು ವಿಟಮಿನ್ ಸಿ, ಎ ಹೇರಳವಾಗಿ ಹೊಂದಿದೆ ಜೊತೆಗೆ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು, ಪೊಟ್ಯಾಸಿಯಂ ಮತ್ತು ಫೈಬರ್ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
*ಈ ಹಣ್ಣಿನಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸೋಂಕುಗಳಿಗೆ ಕಾರಣವಾಗುವ ಕೆಟ್ಟ ಬ್ಯಾಕ್ಟೀರಿಯಾ ಮತ್ತು ವೈರಸ್ ನ್ನು ಕೊಲ್ಲುತ್ತದೆ.
*ಪೇರಳೆ ಹಣ್ಣು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ನಿಮ್ಮ ಕರುಳಿನಲ್ಲಿರುವ ಹಾನಿಕಾರಕ ಸೂಕ್ಷ್ಮಜೀವಿಗಳನ್ನು ನಾಶಮಾಡುತ್ತದೆ.
*ಗರ್ಭಿಣಿಯರು ಇದನ್ನು ಸೇವಿಸುವುದರಿಂದ ಮಗುವಿನ ನರಮಂಡಲವನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡುತ್ತದೆ. ಇದು ಮಗುವನ್ನು ನರರೋಗದಿಂದ ಕಾಪಾಡುತ್ತದೆ.
*ಈ ಹಣ್ಣು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ಹೃದಯದ ಅಪಾಯವನ್ನು ಕಡಿಮೆ ಮಾಡುತ್ತದೆ.
PublicNext
20/02/2021 11:49 am