ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ಮಗು ಸೇರಿ 7 ಮಂದಿ ಸಾವು

ಚೆನ್ನೈ: ತಮಿಳುನಾಡಿನ ತಿರುಚಿ-ದಿಂಡಿಗಲ್ ಹೆದ್ದಾರಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಬೆಂಕಿ ಕಾಣಿಸಿಕೊಂಡು ಓರ್ವ ಬಾಲಕ, ಮೂವರು ಮಹಿಳೆಯರು ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದಾರೆ.

ನಾಲ್ಕು ಅಂತಸ್ತಿನ ‘ಸಿಟಿ ಆಸ್ಪತ್ರೆ’ಯ ನೆಲ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಎಲ್ಲ ವ್ಯಾಪಿಸಿದೆ. ತಕ್ಷಣವೇ 50ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳ ಸಹಾಯದಿಂದ ರೋಗಿಗಳನ್ನು ಇತರೆಡೆಗೆ ಸಾಗಿಸಲಾಗಿದೆ. 30 ಮಂದಿಯನ್ನು ದಿಂಡುಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಐವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ದಿಂಡಿಗಲ್ ಜಿಲ್ಲಾಧಿಕಾರಿ ಪೂಂಗುಡಿ ಅವರು ಕೂಡ ಸ್ಥಳ ಪರಿಶೀಲಿಸಿ, ಅಗ್ನಿ ದುರಂತಕ್ಕೆ ಕಾರಣ ಪತ್ತೆಗೆ ಸೂಚಿಸಿದ್ದಾರೆ. ಈ ಬಗ್ಗೆ ಕೂಲಂಕಷ ತನಿಖೆಗೆ ಆದೇಶಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Edited By : Vijay Kumar
PublicNext

PublicNext

13/12/2024 09:11 am

Cinque Terre

9.97 K

Cinque Terre

0

ಸಂಬಂಧಿತ ಸುದ್ದಿ