ಬೆಂಗಳೂರು: ರಾಜ್ಯದಲ್ಲಿ ಮತ್ತೆ ದಿನದಿಂದ ದಿನಕ್ಕೆ ನಿಧಾನವಾಗಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಇದೇ ಬುಧವಾರ 501 ಮಂದಿಗೆ ಕೊರೊನಾ ದೃಢಪಟ್ಟಿದ್ದರೆ, ಇಂದು 674 ಜನರಿಗೆ ಪಾಸಿಟಿವ್ ಬಂದಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 815 ಜನ ಸೋಂಕಿನಿಂದ ಗುಣಮುಖರಾಗಿದ್ದರೆ, ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,34,252ಕ್ಕೆ ಏರಿದರೆ, ಇದರಲ್ಲಿ 9,14,492 ಜನ ಚೇತರಿಸಿಕೊಂಡಿದ್ದಾರೆ. 7,554 ಪ್ರಕರಣಗಳು ಸಕ್ರಿಯವಾಗಿದ್ದು, 12,187 ಜನ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ.
ಸದ್ಯ 171 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ದಿನದ ಪಾಸಿಟಿವಿಟಿ ಪ್ರಮಾಣ ಶೇ.0.75ರಷ್ಟಿದ್ದರೆ, ಮರಣ ಪ್ರಮಾಣ ಶೇ.0.29ರಷ್ಟಿದೆ. ಇತ್ತ ಬೆಂಗಳೂರಿನಲ್ಲಿ ಇಂದು 371 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,96,140ಕ್ಕೆ ಏರಿದೆ.
ಬೆಂಗಳೂರು ಗ್ರಾಮಾಂತರ 13, ಬಳ್ಳಾರಿಯಲ್ಲಿ 07, ಬೆಳಗಾವಿ 13, ಬೀದರ್ 02, ಚಾಮರಾಜನಗರ 01, ಚಿಕ್ಕಬಳ್ಳಾಪುರ 18, ಚಿಕ್ಕಮಗಳೂರು 05, ಚಿತ್ರದುರ್ಗ 06, ದಕ್ಷಿಣ ಕನ್ನಡ 39, ದಾವಣಗೆರೆ 07, ಧಾರವಾಡ 09, ಗದಗ 01 ಹಾಗೂ ಹಾಸನದಲ್ಲಿ 16 ಕೊರೊನಾ ಪ್ರಕರಣಗಳು ಕಂಡುಬಂದಿವೆ.
ಹಾವೇರಿಯಲ್ಲಿ 03, ಕಲಬುರಗಿ 40, ಕೊಡಗು 05, ಕೋಲಾರ 10, ಕೊಪ್ಪಳ 01, ಮಂಡ್ಯ 06, ಮೈಸೂರು 35, ರಾಯಚೂರು 01, ರಾಮನಗರ 02, ಶಿವಮೊಗ್ಗ 17, ತುಮಕೂರು 26, ಉಡುಪಿ 07, ಉತ್ತರ ಕನ್ನಡ 08, ವಿಜಯಪುರ 02 ಹಾಗೂ ಯಾದಗಿರಿಯಲ್ಲಿ 03 ಕೇಸ್‌ಗಳು ಕಂಡುಬಂದಿವೆ. ಬಾಗಲಕೋಟೆಯಲ್ಲಿ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ.
PublicNext
21/01/2021 10:07 pm