ಬೆಂಗಳೂರು/ಹೊಸದಿಲ್ಲಿ: ಕೇರಳದಲ್ಲಿ ಹಕ್ಕಿಜ್ವರವು ಆತಂಕ ಹೆಚ್ಚಿರುವ ಕಾರಣ ರಾಜ್ಯದ ಗಡಿ ಜಿಲ್ಲೆಗಳಲ್ಲೂ ಹೈ ಅಲರ್ಟ್ ಘೋಷಣೆ ಮಾಡಿ, ಇತರ ಎಲ್ಲ ಜಿಲ್ಲೆಗಳಲ್ಲಿಯೂ ನಿಗಾ ವಹಿಸುವಂತೆ ಪಶುಸಂಗೋಪನ ಇಲಾಖೆ ಸೂಚಿಸಿದೆ.
ಕೇರಳ -ಕರ್ನಾಟಕ ಗಡಿಯ ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಈ ಜಿಲ್ಲೆಗಳಿಗೆ ಕೇರಳದಿಂದ ಬರುವ ಎಲ್ಲ ವಾಹನಗಳಿಗೂ ಕಡ್ಡಾಯ ತಪಾಸಣೆ, ರಾಸಾಯನಿಕ ಸಿಂಪಡಣೆ ಮಾಡಲಾಗು ತ್ತಿದೆ.
ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಅಸಹಜವಾಗಿ ಹಕ್ಕಿಗಳು ಸಾವಿ ಗೀಡಾಗಿದ್ದರೆ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ತೆರಳಿ ಪರಿಶೀಲನೆ ನಡೆಸಬೇಕು.
ಹಕ್ಕಿ ಜ್ವರ ಲಕ್ಷಣ ಕಂಡುಬಂದರೆ ಮಾದರಿಯನ್ನು ಬೆಂಗಳೂರಿನ ಪಶುವೈದ್ಯಕೀಯ ಸಂಶೋಧನ ಸಂಸ್ಥೆಗೆ ಕಳುಹಿಸಬೇಕು ಎಂದು ಇಲಾಖೆ ತಿಳಿಸಿದೆ.
PublicNext
06/01/2021 11:13 am