ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನ್‌ಲಾಕ್ 5.0: ಇನ್ಮುಂದೆ ಸ್ವಿಮ್ಮಿಂಗ್ ಪೂಲ್, ಥಿಯೇಟರ್ ಓಪನ್- ಯಾವುದಕ್ಕೆ ವಿನಾಯ್ತಿ?

ನವದೆಹಲಿ: ಕೇಂದ್ರ ಸರ್ಕಾರ ಅನ್‌ಲಾಕ್ 5ರ ಮಾರ್ಗಸೂಚಿ ಪ್ರಕಟಿಸಿದ್ದು, ಥಿಯೇಟರ್, ಸ್ವಿಮ್ಮಿಂಗ್‌ ಫೂಲ್ ತೆರೆಯಲು ಕೇಂದ್ರ ಸರ್ಕಾರ ಷರತ್ತುಬದ್ಧ ಅನುಮತಿಯನ್ನು ನೀಡಿದೆ. ಬಹುತೇಕ ಚಟುವಟಿಕೆಗಳಿಗೆ ಅಕ್ಟೋಬರ್ 15ರ ನಂತರವೇ ಗ್ರೀನ್ ಸಿಗ್ನಲ್ ನೀಡಿದೆ.

ಅಕ್ಟೋಬರ್ 15ರ ನಂತರ ಗ್ರೀನ್ ಸಿಗ್ನಲ್:

* ಚಿತ್ರಮಂದಿರ/ ಸಿಂಗಲ್ ಸ್ಕ್ರೀನ್/ ಮಲ್ಟಿಫ್ಲೆಕ್ಸ್ ಗಳನ್ನು ಶೇ.50ರಷ್ಟು ಆಸನ ಸಾಮರ್ಥ್ಯದಲ್ಲಿ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಜೊತೆಗೆ ಸಿಬ್ಬಂದಿ ಕೊರೊನಾಗೆ ಸಂಬಂಧಿಸಿದ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಕಡ್ಡಾಯ.

* ಸಾಮಾಜಿಕ/ಸಾಂಸ್ಕೃತಿಕ/ ಶೈಕ್ಷಣಿಕ/ಕ್ರೀಡೆ/ಮನರಂಜನಾ/ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಕೇವಲ ನೂರು ಜನರು ಭಾಗವಹಿಸಲು ಅನುಮತಿ ನೀಡಲಾಗಿತ್ತು. ಈಗ ವಿನಾಯ್ತಿ ನೀಡಿ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಲಾಗಿದೆ.

* ಅಕ್ಟೋಬರ್ 15ರ ನಂತರವೇ ಶಾಲೆ, ಕಾಲೇಜು, ಶೈಕ್ಷಣಿಕ ಸಂಸ್ಥೆ ಮತ್ತು ತರಬೇತಿ ಕೇಂದ್ರ ಆರಂಭಿಸುವ ಕುರಿತು ಪ್ಲಾನ್ ಮಾಡಿಕೊಳ್ಳಬೇಕಿದೆ. ಪರಿಸ್ಥಿತಿ ನೋಡಿಕೊಂಡು ಶಾಲಾ ಕಾಲೇಜು ಆರಂಭಿಸಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ.

* ಬಿ2ಬಿ ಬ್ಯುಸಿನೆಸ್ ಗೆ ಸಂಬಂಧಿಸಿದ ಪ್ರದರ್ಶನ ನಡೆಸಲು ಅನುಮತಿ

* ಕೇವಲ ಕ್ರೀಡಾಪಟುಗಳಿಗೆ ಈಜುಕೊಳ ತೆರೆಯಬಹುದಾಗಿದೆ.

* ಪಾರ್ಕ್ ಸೇರಿದಂತೆ ಇತರೆ ಮನರಂಜನಾ ಕೇಂದ್ರಗಳ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

* ಆನ್‍ಲೈನ್/ಡಿಸ್ಟನ್ಸ್ ಪಾಠ ಮುಂದುವರಿಸುವುದು ಮತ್ತು ಪ್ರೋತ್ಸಾಹಿಸುವುದು.

* ಕೆಲ ವಿದ್ಯಾರ್ಥಿಗಳು ಶಾಲೆಗೆ ಬರಲು ಇಷ್ಟಪಡುತ್ತಿದ್ದಾರೆ. ಶಾಲೆಗೆ ಬರುವ ಮಕ್ಕಳು ಕಡ್ಡಾಯವಾಗಿ ಪೋಷಕರಿಂದ ಲಿಖಿತ ರೂಪದಲ್ಲಿ ಅನುಮತಿ ಪತ್ರ ಪಡೆದಿರಬೇಕು.

* ಶಾಲೆಗಳು ಮಕ್ಕಳಿಗೆ ಹಾಜರಾತಿ ಕಡ್ಡಾಯವೆಂದು ಸೂಚಿಸುವಂತಿಲ್ಲ.

* ಉನ್ನತ ಶಿಕ್ಷಣ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೂ ಆಕ್ಟೋಬರ್ 15ರ ನಂತರವೇ ಕಾಲೇಜುಗಳಿಗೆ ತೆರಳಲು ಅವಕಾಶ ನೀಡಲಾಗಿದೆ. ಸ್ನಾತಕೋತ್ತರ ಮತ್ತು ಪ್ರಯೋಗಾಲಯದ ವಿದ್ಯಾರ್ಥಿಗಳ ಪ್ರವೇಶಕ್ಕೆ ಯುನಿವರ್ಸಿಟಿಗಳು ಅನುಮತಿ ನೀಡುವುದು.

Edited By : Vijay Kumar
PublicNext

PublicNext

30/09/2020 09:47 pm

Cinque Terre

116.81 K

Cinque Terre

3