ನವದೆಹಲಿ: ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದ ಡೆಡ್ಲಿ ಸೋಂಕು ಕೊರೊನಾ ಎಲ್ಲರನ್ನೂ ಹಿಡಿ ಹಿಪ್ಪೆ ಮಾಡಿದೆ.
ಮಾರಕ ಸೋಂಕಿನಿಂದಾಗಿ ಸಾಕಷ್ಟು ಸಾವು ನೋವು ಗಳು ಸಂಭವಿಸಿವೆ ಸದ್ಯ ಸುಪ್ರೀಂ ಕೋರ್ಟ್ ನಲ್ಲಿ ಡೆಡ್ಲಿ ಸೋಂಕಿಗೆ ಮೊದಲ ಬಲಿಯಾಗಿದ್ದು, ಇತ್ತೀಚೆಗಷ್ಟೇ ಸೋಂಕಿಗೆ ತುತ್ತಾಗಿದ್ದ ಹಿರಿಯ ಆಡಳಿತ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತರನ್ನು ರಾಜೇಂದ್ರ ರಾವತ್ ಎಂದು ಗುರುತಿಸಲಾಗಿದ್ದು, ಅವರು ಎಸ್ ಸಿಯ ಆಡಳಿತ ವಿಭಾಗದಲ್ಲಿದ್ದರು.
ಐದು ದಿನಗಳ ಹಿಂದಷ್ಟೇ ಅವರ ಕೋವಿಡ್ -19 ಪರೀಕ್ಷೆ ಪಾಸಿಟಿವ್ ಬಂದಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ಸುಪ್ರೀಂ ಕೋರ್ಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾವತ್ ಅವರಿಗೆ ಸುಮಾರು 50 ವರ್ಷದ ರಾವತ್ ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಇದು ದೇಶದ ಉನ್ನತ ನ್ಯಾಯಾಲಯದಲ್ಲಿ ಸಂಭವಿಸಿದ ಮೊದಲ ಕೊರನಾ ಸಾವಾಗಿದೆ.
ಕೊರೊನಾ ಗೆ ಸಂಬಂಧಿಸಿದಂತೆ ಕೋರ್ಟ್ ಗಳ ಅವರಣದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮವಹಿಸಲಾಗಿದೆ.
ರಾಷ್ಟ್ರೀಯ ಲಾಕ್ ಡೌನ್ ವಿಧಿಸುವ ಎರಡು ದಿನಗಳ ಮೊದಲು ಮಾರ್ಚ್ 23 ರಿಂದಲೇ ಸುಪ್ರೀಂ ಕೋರ್ಟ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅರ್ಜಿಗಳ ವಿಚಾರಣೆ ಆಲಿಸುತ್ತಿದೆ.
ಆದಾಗ್ಯೂ ಸುಪ್ರೀಂ ಕೋರ್ಟ್ ನಲ್ಲಿ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.
PublicNext
23/11/2020 01:03 pm